ಎಲ್ಲರ ಜೊತೆ ಆಟ ಆಡಿದ ಹಾಗೆ ನನ್ನ ಜೊತೆಗೆ ಆಟ ಆಡಬೇಡ: HDK ಗೆ ಏಕವಚನದಲ್ಲೇ ಎಚ್ಚರಿಕೆ ನೀಡಿದ ಅಶ್ವತ್ಥ್ ನಾರಾಯಣ್

ಬೆಂಗಳೂರು

ಬೆಂಗಳೂರು: ಎಲ್ಲರ ಜೊತೆ ಆಟ ಆಡಿದ ಹಾಗೆ ನನ್ನ ಜೊತೆಗೆ ಆಟ ಆಡಬೇಡ ಎಂದು  ಸಚಿವ ಅಶ್ವತ್ಥ್​​ ನಾರಾಯಣ್, ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ​ ಏಕವಚನದಲ್ಲೇ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇನ್ ಬಿಚ್ಚಿಡ್ತಿರೋ ಬಿಚ್ಚಿಡಿ, ಮಿಸ್ಟರ್ ಬ್ಲ್ಯಾಕ್​​​ ಮೇಲರ್, ಅದೇನು ಬಿಚ್ಚಿಡ್ತೀಯೋ ಬಿಚ್ಚಿಡಪ್ಪಾ. ಅದೆಲ್ಲೋ ಫೈವ್​​ ಸ್ಟಾರ್ ಹೋಟೆಲ್​​ನಲ್ಲಿ ಬಿಚ್ಚಿಡ್ತಾ ಇದ್ಯಲ್ಲಪ್ಪಾ. ಎಲ್ಲೆಲ್ಲೋ ಆಟ ಆಡಿದ ಹಾಗೆ ಇಲ್ಲಿ ಆಡಲು ಆಗಲ್ಲ. ನಮ್ಮದು ಕುಟುಂಬ ಆಧಾರಿತ ಪಕ್ಷ ಅಲ್ಲ.

ಸುಮ್ಮನೆ ಬಿಚ್ಚಿಡ್ತೀನಿ..ಬಿಚ್ಚಿಡ್ತೀನಿ ಅಂದ್ರೆ ಇಲ್ಲಿ ನಡೆಯಲ್ಲ. ನಿಮ್ಮ ಹಾಗೆ ನಮ್ಮಲ್ಲಿ ಯಾವುದೂ ಗುಟ್ಟುಗಳಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಸಿಎಂ ಬದಲಾವಣೆಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಬಹಳಷ್ಟು ಸಮಸ್ಯೆ ಕಾಡುತ್ತಿದೆ. ಪಕ್ಷದ ಒಳಗಿನ ಸಮಸ್ಯೆಗಾಗಿ ಎಲ್ಲೆಲ್ಲೋ ಗುಂಡು ಹೊಡೆಯುತ್ತಿದ್ದಾರೆ. ಸಿಎಂ ಬದಲಾವಣೆ ಇಲ್ಲ. ನಮ್ಮ ಮುಖ್ಯಮಂತ್ರಿಗಳು ಸಾಕಷ್ಟು ಅನುಭವ, ತಿಳುವಳಿಕೆ ಇರುವವರು ಎಂದು ಸಚಿವರು ಹೇಳಿದ್ದಾರೆ.

Leave a Reply

Your email address will not be published.