
ನಿವೃತ್ತಿಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ನ್ಯೂಜಿಲೆಂಡ್ ಕ್ರಿಕೆಟರ್
ಆಕ್ಲೆಂಡ್: ಪ್ರತಿಯೊಬ್ಬ ಆಟಗಾರನೂ ತನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸುವರ್ಣ ಅಂತ್ಯವನ್ನು ಬಯಸುತ್ತಾನೆ. ಒಬ್ಬ ಬ್ಯಾಟ್ಸ್ಮನ್ಗೆ ಕೊನೆಯ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದರೆ ಅದಕ್ಕಿಂತ ವಿಶೇಷದ ಪಂದ್ಯ ಮತ್ತೊಂದಿರಲ್ಲ. ಇದೀಗ ನ್ಯೂಜಿಲೆಂಡ್ನ 38 ವರ್ಷದ ಬ್ಯಾಟ್ಸ್ಮನ್ ಅನಾರು ಕಿಚನ್ ಸ್ಮರಣೀಯ ಇನಿಂಗ್ಸ್ ಮೂಲಕ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳಿದ್ದಾರೆ. ಅನಾರು ಅವರು ಅದ್ಭುತ ಶತಕದೊಂದಿಗೆ ತಮ್ಮ 14 ವರ್ಷಗಳ ದೇಶೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದರು. ನ್ಯೂಜಿಲೆಂಡ್ನ ದೇಶೀಯ ಟೂರ್ನಿಯಾದ ಫೋರ್ಡ್ ಟ್ರೋಫಿಯಲ್ಲಿ ಒಟಾಗೊ ವೋಲ್ಟ್ಸ್ ಪರ ಆಡಿದ್ದ ಅನಾರು ಕೇವಲ 89 ಎಸೆತಗಳಲ್ಲಿ ಶತಕ ಪೂರೈಸಿದರು. ಆಕ್ಲೆಂಡ್ ಏಸಸ್ ವಿರುದ್ಧದ ತಮ್ಮ ಕೊನೆಯ ಇನ್ನಿಂಗ್ಸ್ ಆಡಿದ್ದ ಕೊನೆಯ ಇನ್ನಿಂಗ್ಸ್ನಲ್ಲಿ 95 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿದರು. ಈ ವೇಳೆ ಅವರು 7 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಇದು ಲಿಸ್ಟ್ ಎ ಕ್ರಿಕೆಟ್ನಲ್ಲಿ ಅವರ 5ನೇ ಶತಕವಾಗಿದೆ. ಇದಾಗ್ಯೂ ಈ ಪಂದ್ಯದಲ್ಲಿ ಒಟಾಗೊ ವೋಲ್ಟ್ಸ್ ತಂಡವು ಸೋಲನುಭವಿಸಿತು. ಅನಾರು ಕಿಚನ್ ಅವರು 2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ T20 ಯಲ್ಲಿ ನ್ಯೂಜಿಲೆಂಡ್ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಿವೀಸ್ ಪರ ಒಟ್ಟು 5 ಟಿ20 ಪಂದ್ಯಗಳನ್ನು ಆಡಿರುವ ಕಿಚನ್, 38 ರನ್ ಗಳಿಸಿ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದರು.