ಫೇಸ್ ಬುಕ್ ನಲ್ಲಿ ಪರಿಚಯ: ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದ ಯುವಕ..! CBI ಹೆಸರಲ್ಲಿ ಲಕ್ಷ ಲಕ್ಷ ವಂಚನೆ

ಬೆಂಗಳೂರು

ಬೆಂಗಳೂರು: ಸಿಬಿಐ ಹೆಸರು ಬಳಸಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೊದಲಿಗೆ ಫೇಸ್​ಬುಕ್ ಮೂಲಕ ಪರಿಚಯವಾಗಿ ಬಳಿಕ ಹಲವಾರು ದಿನ ಸ್ನೇಹಿತೆಯಾಗಿದ್ದು, ಚಾಟ್ ಮಾಡಲಾಗಿದೆ.

ಬಳಿಕ ವಿಡಿಯೋ ಕಾಲ್​ನಲ್ಲಿ ಇಬ್ಬರು ನಗ್ನವಾಗಿದ್ದಾರೆ. ನಗ್ನವಾಗಿ ಮಾಡಿದ್ದ ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಹಣ ನೀಡುವಂತೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಹಣ ನೀಡದೆ ದೂರುದಾರ ಸುಮ್ಮನಾಗಿದ್ದ. ನಂತರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮತ್ತೆ ಫೋನ್ ಕಾಲ್ ಮಾಡಿದ್ದು, ಕೇಸ್ ಈಗ ಸಿಬಿಐಗೆ ಹೋಗಿದೆ ಎಂದು ಹೇಳಲಾಗಿದೆ.

ಸಿಬಿಐನಲ್ಲಿ ಈಗಾಗಲೇ ದಾಖಲಾಗಿರೋ ಎಫ್​ಐಆರ್​ಗೆ ಹೆಸರು ಎಡಿಟ್ ಮಾಡಿ ಬೆದರಿಕೆ ಹಾಕಿದ್ದು, ಕೇಸ್​​ನಲ್ಲಿ ನಿಮ್ಮನ್ನೆ ಅರೆಸ್ಟ್ ಮಾಡಿಸುತ್ತೆವೆ ಎಂದು ಆರೋಪಿಗಳು ಬೆದರಿಕೆ ಹಾಕಲಾಗಿದೆ. ಕೊನೆಗೆ ಐದು ಲಕ್ಷ ಹಣ ವಸೂಲಿ ಮಾಡಿದ್ದು, ಹಣ ನೀಡದೆ ಇದ್ದರೆ ಸಿಬಿಐ ನಿಮ್ಮ ಮನೆಗೆ ಬರುತ್ತಾರೆ ಎಂದು ಹೆದರಿಸಲಾಗಿದೆ.

ಸದ್ಯ ಈ ಬಗ್ಗೆ ಅಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Leave a Reply

Your email address will not be published.