ಬಿರ್ಲಾ ಕಂಪನಿ ವಾಲ್ ಕೇರ್ ಹೆಸರಲ್ಲಿ ನಕಲಿ ವಾಲ್ ಕೇರ್ ಪುಟ್ಟಿ ತಯಾರು: ಆರೋಪಿ ಅಂದರ್

ಅಪರಾಧ

ಬೆಂಗಳೂರು: ಬಿರ್ಲಾ ಕಂಪನಿಯ ವಾಲ್ ಕೇರ್ ಹೆಸರಲ್ಲಿ ನಕಲಿ ವಾಲ್ ಕೇರ್ ಪುಟ್ಟಿ ತಯಾರಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿದ್ದ ಈ ಫ್ಯಾಕ್ಟರಿಯಲ್ಲಿ, ಬಿರ್ಲಾ ಕಂಪನಿಯ ಹೆಸರಲ್ಲಿ, ಆರೋಪಿಗಳು ನಕಲಿ ವಾಲ್ ಕೇರ್ ಪುಟ್ಟಿ ತಯಾರಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಖಚಿತ ಮಾಹಿತಿ ಪಡೆದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, 105 ಪ್ಯಾಕೆಟ್ ನಕಲಿ ವಾಲ್ ಕೇರ್ ಪುಟ್ಟಿ ತಯಾರಿಕಾ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆರೋಪಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.