ಕುಟುಂಬ ಸಮೇತ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದ ಮಾಜಿ ಸಿಎಂ..!

ಜಿಲ್ಲೆ

ರಾಯಚೂರು: ಗುರುರಾಘವೇಂದ್ರ ಸ್ವಾಮಿಗಳ 451ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಹಾಗು ತಮ್ಮ ಸೊಸೆಯಂದಿರ ಜೊತೆ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.ರಾಯರ ದರ್ಶನ ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು.

ಈ ವೇಳೆ ಬಿಎಸ್‍ವೈ ಜೊತೆ ಶ್ರೀಗಳು ಮಾತುಕತೆ ನಡೆಸಿದರು. 2009ರಲ್ಲಿ ಭೀಕರ ಪ್ರವಾಹ ಬಂದಾಗ ನೀವು ಸಿಎಂ ಆಗಿದ್ದು ಸಾಕಷ್ಟು ಪರಿಹಾರ ನೀಡಿದಿರಿ, ಆಗ ಮಂತ್ರಾಲಯಕ್ಕೂ ಪ್ರವಾಹ ಎದುರಾಗಿತ್ತು. ಕರ್ನಾಟಕ ಹಾಗೂ ಮಂತ್ರಾಲಯ ಸಂಪರ್ಕ ಸೇತುವೆ ನಿರ್ಮಿಸಿದ್ದಿರಿ ಎಂದು ಶ್ರೀಗಳು ಬಿಎಸ್‍ವೈ ಗುಣಗಾನ ಮಾಡಿದರು. ಬಿಎಸ್‍ವೈ, ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರಗೆ ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶಿರ್ವದಿಸಿದರು.

Leave a Reply

Your email address will not be published.