ಫೇಮಸ್ ಹಾಡಿಗೆ ಯಜುವೇಂದ್ರ ಚಾಹಲ್ ಪತ್ನಿಯ ಭರ್ಜರಿ ಡಾನ್ಸ್..! Video ವೈರಲ್

ಕ್ರೀಡೆ

ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್ಸ್‌ಟಾಗ್ರಾಮ್‌ನಲ್ಲಿ ನೀವು ಧನಶ್ರಿ ವರ್ಮ ಅವರನ್ನು ಫಾಲೋ ಮಾಡುತ್ತಿದ್ದರೆ, ನಿಮಗೆ ಬೋರ್‌ ಆಗಲು ಸಾಧ್ಯವೇ ಇಲ್ಲ. ನಿಯಮಿತವಾಗಿ ಹೊಸ ಹೊಸ ಡಾನ್ಸ್‌ ವಿಡಿಯೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಆಗಸ್ಟ್‌ 7 ರಂದು ಯಜುವೇಂದ್ರ ಚಾಹಲ್‌ ಪತ್ನಿ ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ಡಾನ್ಸ್‌ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇದರಲ್ಲಿ ಅವರು ತೆಲುಗಿನ ಸೂಪರ್‌ಹಿಟ್‌ ಗೀತೆ ರಾ ರಾ ರೆಡಿ ಹಾಡಿಗೆ ಸಖತ್‌ ಆಗಿ ಡಾನ್ಸ್‌ ಮಾಡಿದ್ದಾರೆ. ನು ಮಾಚರ್ಲಾ ನಿಯೋಜಕವರ್ಗಂ ಚಿತ್ರ ಐ ಆಮ್‌ ರೆಡಿ ಗೀತೆ ಇದಾಗಿದೆ, ಈ ಹಾಡಿನಲ್ಲಿ ನಿತಿನ್ ಮತ್ತು ಅಂಜಲಿ ಡಾನ್ಸ್ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಆಂಧ್ರದಲ್ಲಿ ಸೂಪರ್‌ಹಿಟ್‌ ಗೀತೆ ಎನಿಸಿದೆ. ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಧನಶ್ರೀ ಅವರು, ಡಾನ್ಸ್‌ ಪಾರ್ಟ್‌ನರ್‌ ಜೊತೆ ಅದ್ಭುತವಾಗಿ ಡಾನ್ಸ್‌ ಮಾಡಿದ್ದಾರೆ. ಅವರು ಅದ್ಬುತವಾಗಿ ಪ್ರದರ್ಶನ ನೀಡಿದ್ದು,

 

ವಿಡಿಯೋ ನೋಡುವ ವೇಳೆ ಅವರ ಡಾನ್ಸ್‌ ಮೂವ್‌ಗಳಿಗೆ ನೀವು ಖಂಡಿತವಾಗಿ ಅಚ್ಚರಿ ಪಡ್ತೀರಾ. ಇನ್ಸ್‌ಟಾಗ್ರಾಮ್‌ನ ಈ ವಿಡಿಯೋಗೆ ಈಗಾಗಲೇ 2 ಮಿಲಿಯನ್‌ ವೀವ್ಸ್‌ಗಳು ಸಿಕ್ಕಿವೆ. “ಆಲ್ವೇಸ್‌ ಬೋರ್ನ್ ರೆಡಿ..! ರಾ ರಾ ರೆಡಿ, ಐ ಆಮ್‌ ರೆಡಿ. ನಿಮ್ಮ ಶಕ್ತಿಯು ಯಾವಾಗಲೂ ಪರಿಮಾಣವನ್ನು ಹೇಳುತ್ತದೆ, ನೀವು ಮಾತನಾಡುವ ಮೊದಲು ಅದು ನಿಮ್ಮನ್ನು ಪರಿಚಯಿಸುತ್ತದೆ.

ಎಂದು ವಿಡಿಯೋ ಪೋಸ್ಟ್‌ ಮಾಡುವ ವೇಳೆ ಬರೆದುಕೊಂಡಿದ್ದಾರೆ. ಧನಶ್ರೀ ವರ್ಮ ಅವರ ಅಭಿಮಾನಿಗಳು ಹಾಗೂ ಫಾಲೋವರ್‌ಗಳು ಈ ನೃತ್ಯದ ವಿಡಿಯೋವನ್ನು ಸಖತ್‌ ಇಷ್ಟಪಟ್ಟಿದ್ದಾರೆ. ಕಾಮೆಂಟ್‌ ವಿಭಾಗದಲ್ಲಿ ಅದ್ಭುತ, ಸೂಪರ್‌ ಹಾಗೂ ಅತ್ಯಾಕರ್ಷಕ ಎನ್ನುವ ಪದಗಳಲ್ಲಿ ಅವರ ನೃತ್ಯವನ್ನು ವರ್ಣನೆ ಮಾಡಿದ್ದಾರೆ. ಈ ವಿಡಿಯೋಗೆ ಈಗಾಗಲೇ 4.30 ಲಕ್ಷ ಲೈಕ್ಸ್‌ಗಳು ಬಂದಿವೆ.

Leave a Reply

Your email address will not be published.