ಚಾಮರಾಜನಗರ. ಜಿಲ್ಲೆಯಲ್ಲಿ ಆಸ್ತಿ ವಿವಾದ ಸಂಬಂಧ ಮಗನನ್ನೇ ತಂದೆ ಹತ್ಯೆಗೈದಿದ್ದಾನೆ.ಗುಂಡ್ಲುಪೇಟೆ ತಾಲ್ಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಎಂಬಾತನನ್ನು ತಂದೆ ಮಹದೇವಪ್ಪ ಎಂಬಾತ ಕೊಡಲಿಯಿಂದ ಹಲ್ಲೆಗೈದು ಕೊಲೆಗೈದಿದ್ದಾನೆ.
ಆರೋಪಿ ಮಹದೇವಪ್ಪಗೆ ಐದು ಗಂಡು, ನಾಲ್ವರು ಹೆಣ್ಣು ಮಕ್ಕಳು. ಆದರೆ ಆಸ್ತಿ ವಿಚಾರವಾಗಿ ಇಪ್ಪತ್ತು ವರ್ಷಗಳಿಂದ ತಂದೆ ಮಕ್ಕಳಿಗೆ ವಿರಸ ಉಂಟಾಗಿತ್ತು. ಹತ್ಯೆಯಾದ ಮಲ್ಲಿಕಾರ್ಜುನ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಜಮೀನಿನಲ್ಲಿ ಮರವನ್ನು ಕಡಿಯುತ್ತಿದ್ರು.
ಏಕಾಏಕಿ ಬಂದ ಮಹದೇವಪ್ಪ ಜಗಳ ತೆಗೆದು ಕೊಡಲಿಯಿಂದ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.