Home Crime ಆಸ್ತಿ ವಿಚಾರಕ್ಕೆ ತಂದೆ-ಮಗನ ಕಲಹ;ಕೊಲೆಯಲ್ಲಿ ಅಂತ್ಯ

ಆಸ್ತಿ ವಿಚಾರಕ್ಕೆ ತಂದೆ-ಮಗನ ಕಲಹ;ಕೊಲೆಯಲ್ಲಿ ಅಂತ್ಯ

211
0
SHARE

ಬೆಂಗಳೂರು. ಕಳೆದ ಫೆಬ್ರುವರಿ 14ನೇ ತಾರೀಖಿನಂದು ನಡೆದಿದ್ದ ವೃದ್ದ ಮಾಧವನ ಕೊಲೆ ಪ್ರಕರಣವನ್ನು ತಲಘಟ್ಟಪುರ ಪೊಲೀಸರು ಭೇದಿಸಿದ್ದಾರೆ.ಫೆಬ್ರುವರಿ 14 ರಂದು  ಮಾಧವ ನನ್ನು ಐದು ಜನ ದುಷ್ಟರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು,ಆರೋಪಿಗಳ ಬೆನ್ನುಹತ್ತಿದ ಪೊಲೀಸರಿಗೆ ಶಾಕಿಂಗ್ ಸತ್ಯ ಗೊತ್ತಾಗಿದ್ದು, ಆಸ್ತಿ ವಿಚಾರಕ್ಕೆ ಸಂಭಂದಿಸಿದಂತೆ ಹೆತ್ತ ಮಗನೆ ತಂದೆ ಕೊಲೆಗೆ ಸುಪಾರಿ ನೀಡಿದ್ದಾಗಿ ಬೆಳಕಿಗೆ ಬಂದಿದೆ.

 ಚಿಕ್ಕಪ್ಪನ‌ ಜೊತೆಗೂಡಿ ಮಗ ಹಾಗೂ ತಮ್ಮನೇ ವೃದ್ದ ಮಾಧವನ  ಕೊಲೆ ಮಾಡಿಸಿ ಸೈಲೆಂಟ್ ಆಗಿದ್ದರು.ಸುಪಾರಿ ಪಡೆದ ಹಂತಕರು ಮೂರು ಬಾರಿ ಸ್ಕೆಚ್ ಹಾಕಿದ್ದರು ಅದೃಷ್ಟವಶಾತ್ ಮಾಧವ್ ಬಚಾವ್ ಆಗಿದ್ದರು,ಮಾಧವ್ ನ ಮಗ ಹರೀಕೃಷ್ಣ ಹಾಗೂ ಮಾಧವನ ತಮ್ಮ ಶಿವರಾಂ ಪ್ರಸಾದ್  ಕೊಲೆಗೆ ಸುಪಾರಿ ನೀಡಿದ್ದರು ಎಂಬ ಸತ್ಯ ಬಹಿರಂಗವಾಗಿದೆ.

ಮಾಧವನ ಸುಪಾರಿ ಪಡೆದು ಕೊಲೆ ಮಾಡಿದ್ದ  ರಿಯಾಜ್ ಅಹಮ್ಮದ್,ಶಾರುಕ್ ಖಾನ್,ಸೈಯದ್ ಸಲ್ಮಾನ್,ಆದಿಲ್ ಖಾನ್,ಶಾಬಾಜ್ ನಜೀರ್ ಎನ್ನುವರನ್ನ ತಲಘಟ್ಟಪುರ ಪೊಲೀಸರು ಬಂಧಿಸಿದ್ದು,ಆರೋಪಿಗಳು ಕೊಲೆ ಮಾಡಿದ ನಂತರ ಗೋವಾದಲ್ಲಿ ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದರು.ಇನ್ನು ಕೆಲ ಆರೋಪಿಗಳು ಬೆಂಗಳೂರಿನಲ್ಲಿಯೇ ತಲೆ ಮರೆಸಿಕೊಂಡು ಓಡಾಡುತ್ತಿದ್ದರು.

ಇನ್ನು ಸುಪಾರಿ ನೀಡಿದ ಪ್ರಮುಖ ಆರೋಪಿ  ಹರಿಕೃಷ್ಣ,ಹಾಗೂ ಶಿವರಾಂ ಪ್ರಸಾದ್ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ . ಈ ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದು ಶೋಧ ಕಾರ್ಯ ಮುಂದುವರೆದಿದೆ.

LEAVE A REPLY

Please enter your comment!
Please enter your name here