
ಫಾಜಿಲ್ ಹತ್ಯೆ ಪ್ರಕರಣ: ನಿರ್ಜನ ಪ್ರದೇಶದಲ್ಲಿ ಹಂತಕರ ಕಾರು ಪತ್ತೆ
ಉಡುಪಿ : ಇದು ಫಾಜಿಲ್ ಹತ್ಯೆಗೆ ಸಂಬಂಧಿಸಿದ ಸ್ಫೋಟಕ ಸುದ್ದಿಯಾಗಿದ್ದು, ಕಾಪುವಿನಲ್ಲಿ ಫಾಜಿಲ್ ಕೊಂದ ಹಂತಕರ ಕಾರು ಪತ್ತೆ ಯಾಗಿದೆ. ಉಡುಪಿ ಜಿಲ್ಲೆಯ ಕಾಪುವಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಬಳಿ ಬಣ್ಣದ ಇಯಾನ್ ಕಾರ್ ಪತ್ತೆಯಾಗಿದೆ.
KA19 MJ-8496 ನಂಬರ್ನ ಇಯಾನ್ ಕಾರಿದ್ದು. ಹಂತಕರು ಫಾಜಿಲ್ ಹತ್ಯೆಗೆ ಇಯಾನ್ ಕಾರ್ನಲ್ಲಿ ಬಂದಿದ್ದರು. ಪೊಲೀಸರು ಇಯಾನ್ ಕಾರು ಮಾಹಿತಿ ಬೆನ್ನತ್ತಿ ಹೋಗಿದ್ಧಾರೆ. ಮಂಗಳೂರು ಪೊಲೀಸರು ಉಡುಪಿ ಜಿಲ್ಲೆ ಕಡೆ ದೌಡಾಯಿಸಿದ್ಧಾರೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶವಾಗಿದೆ.