Fazil Murder Case..ಫಾಜಿಲ್ ಹತ್ಯೆ ಭೀಕರ ದೃಶ್ಯ CCTVಯಲ್ಲಿ ಸೆರೆ

ಜಿಲ್ಲೆ

ಪ್ರವೀಣ್ ಹತ್ಯೆ ಇಡೀ ದಕ್ಷಿಣ ಕನ್ನಡ ಮಾತ್ರವಲ್ಲ ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಗೆ ಗ್ರಾಸವಾಯ್ತು. ಅದರಲ್ಲೂ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆ ಮುಖಂಡರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಅಷ್ಟೆ ಅಲ್ಲ ಹಿಂದೂ ಪರ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.  ಹಿಂದೂಗಳ ರಕ್ಷಣೆ ಹೆಸರಿನಲ್ಲಿ ಬಂದ ಸರ್ಕಾರಕ್ಕೆ ರಕ್ಷಣೆ ಕೊಡುವ ಜವಾಬ್ದಾರಿ ಇಲ್ವಾ ಅನ್ನೋ ಮಾತುಗಳು ಕೇಳಿ ಬಂದವು.   ಇತ್ತ ಸರ್ಕಾರದ ಸಾಧನೆ ಬಿಂಬಿಸುವ ಕಾರ್ಯಕ್ರಮಕ್ಕೂ ಕೊಕ್ಕೆ ಬಿದ್ದಿತ್ತು. ಸಾವಿನ ಮನೆಯಲ್ಲಿ ಸಂಭ್ರಮದ ಕಾರ್ಯಕ್ರಮವ್ಯಾಕೆ ಅನ್ನೋ ಹಿನ್ನೆಲೆಯಲ್ಲಿ ಸಿಎಂ ಮಧ್ಯರಾತ್ರಿ ದಿಢೀರ್ ಸುದ್ದಿಗೋಷ್ಢಿ ನಡೆಸಿ ತಮ್ಮ ಆಡಳಿತಕ್ಕೆ ವರ್ಷ ತುಂಬಿದ ಹರ್ಷದ ಕಾರ್ಯಕ್ರಮವನ್ನ ರದ್ದು ಮಾಡಿದ್ರು.  ಆ ಮೂಲಕ ಕಾರ್ಯಕರ್ತ ಮುಖ್ಯವೆ ಹೊರತು ಸಮಾರಂಭ ಅಲ್ಲವೆಂದು ಪ್ರವೀಣನ ಸಾವಿಗೆ ದುಖಃತರಾದ್ರೂ ಸಿಎಂ ಬೊಮ್ಮಾಯಿ.

ಸಮಾರಂಭ ರದ್ದು ಮಾಡಿ ಮಂಗಳೂರಿನತ್ತ ಪ್ರಯಾಣ ಮಾಡಿದ ಸಿಎಂ ಪ್ರವೀಣನ ಮನೆಗೆ ಸಚಿವರ ಜೊತೆ ಹೋಗಿ ಸಾಂತ್ವನ ಹೇಳಿದ್ರು. ಸರ್ಕಾರದಿಂದ  ೨೫ ಲಕ್ಷ ರೂ ಪರಿಹಾರ ಹಾಗೂ ಬಿಜೆಪಿ  ವತಿಯಿಂದ ೨೫ ಲಕ್ಷ ಪರಿಹಾರದ ಚೆಕ್ ನೀಡಿದ್ರು. ಅಷ್ಟೆ ಅಲ್ಲ ಜಿಲ್ಲಾಡಳಿತಕ್ಕೆ ಈ ರೀತಿಯಾದ ಕೃತ್ಯ ನಡೆಯಬಾರದು ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಿ ಎಂದು ತಾಕೀತು ಮಾಡಿ ವಿಮಾನವೇರಿ ಬೆಂಗಳೂರಿನತ್ತ ಆಗಮಿಸಿದ್ರು.

ಸಿಎಂ ಬೆಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದಂತೆ, ಅತ್ತ ಕಡಲು ನಗರಿ ಮತ್ತೆ ಪ್ರಕ್ಷುಬ್ಧ ವಾತಾವರಣಕ್ಕೆ ಸಾಕ್ಷಿಯಾಗಿತ್ತು.  ಮಂಗಳೂರಿನ ಮೂಡಾ ಮಾರುಕಟ್ಟೆ  ಸಮೀಪದ ಬಳಿ ಯುವಕ ಮೇಲೆ ಮಾರಕಾಸ್ತ್ರಗಳಿಂದ  ದಾಳಿ ನಡೆಸಿ ಹಂತಕರು ಪರಾರಿಯಾಗಿದ್ರು. ತನ್ನ ಗೆಳೆಯನ ಜೊತೆ ಮಾತನಾಡುತ್ತಿದ್ದ ಮಹಮದ್ ಫಾಝಿಲ್ ಎಂಬಾತನನ್ನ ಮೇಲೆ ಕಾರಿನಲ್ಲಿ ಬಂದ ಹಂತಕರು ಮಚ್ಚು ತಲವಾರ್ ನಿಂದ ಕ್ರೂರವಾಗಿ ಹಲ್ಲೆ ಮಾಡಿದ್ರು. ತೀವ್ರಗಾಯಗೊಂಡಿದ್ದ ಫಾಝಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದ.

ಇತ್ತ ಜಿಲ್ಲೆಯಲ್ಲಿ ಕೋಮುದಳ್ಳುರಿ ಹಚ್ಚುವ ನಾಯಕರಿಗೆ ನಿರ್ಬಂಧವನ್ನ ಜಿಲ್ಲಾಡಳಿತ ಹೇರಿದೆ. ಪ್ರಮೋದ್ ಮುತಾಲಿಕ್ ಅವರನ್ನ ಮುಂದಿನ ಆದೇಶದ ವರೆಗೆ ಜಿಲ್ಲೆಗೆ ಬಾರದಂತೆ ನಿರ್ಬಂಧ ಹೇರಲಾಗಿದೆ.  ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೀಗೆ ಒಂದು ಕೊಲೆಗೆ ಮತ್ತೊಂದು ಕೊಲೆ ಅನ್ನೋ ಪ್ರತಿಕಾರದಲ್ಲಿ ಇಡೀ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳು ಬೆಚ್ಚಿ ಬೀಳಿಸುವಂತೆ ಮಾಡಿದೆ.

Leave a Reply

Your email address will not be published.