ಸದನದಲ್ಲಿ ಹಗರಣಗಳು ಬಯಲಾಗ್ತಾವೆ ಎಂಬ ಭಯದಿಂದ ಕಾಂಗ್ರೆಸ್ ಧರಣಿ – ವಿಧಾನಸೌಧದಲ್ಲಿ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು

ಕಾಂಗ್ರೆಸ್ ಧರಣಿ ಒಂದು ಕಪಟ ನಾಟಕ, ಹಿಜಾಬ್ ವಿಚಾರ ಎಲ್ಲಿ ಸದನದಲ್ಲಿ ಚರ್ಚೆ ಆಗಲಿದೆ ಅಂತ ಹೆದರಿದ್ದಾರೆ. ಹೀಗಾಗಿ ಬಾವಿಗಿಳಿದು ಕಲಾಪ ನಡೆಸಲು ಬಿಡದೆ ಗಲಾಟೆ ಮಾಡ್ತಿದ್ದಾರೆ. ಜೆಡಿಎಸ್ ಕೂಡ ಶಿಕ್ಷಣ ವಿಚಾರವಾಗಿ ಚರ್ಚೆ ಮಾಡಲು ತಯಾರಿದ್ದಾರೆ. ಕಾಂಗ್ರೆಸ್ ನವರಿಗೆ ಹಗರಣ ಬಗ್ಗೆ ಚರ್ಚೆ ಮಾಡ್ತಾರೆ ಅನ್ನೋ ಭಯ ಇದೆ. ಹೀಗಾಗಿ ಈಶ್ವರಪ್ಪ ಅವರ ವಿಚಾರ ಪಟ್ಟು ಹಿಡಿದಿದ್ದಾರೆ.ಕೇಸರಿ ಹಿಡಿದ್ರೆ ಅಲ್ಪಸಂಖ್ಯಾತರು ಓಟ್ ಹೋಗುತ್ತೆ. ಹಿಜಾಬ್ ಹಿಡಿದ್ರೆ ಹಿಂದೂಗಳು ಹೋಗ್ತಾರೆ. ಹೀಗಾಗಿ ಹೆದರಿ ಈ ರೀತಿ ಮಾಡ್ತಿದ್ದಾರೆ. ಇವರ ಇಚ್ಚೆ ಬಂದಂತೆ ಮಾಡಲು ವಿಧಾನಸೌಧ ಕಟ್ಟಿಲ್ಲ. ದಿನನಿತ್ಯ ನೂರಾರು ಕೋಟಿ ಪೋಲಾಗ್ತಿದೆ. ಕಾಂಗ್ರೆಸ್ ನವರಿಗೆ ನೈತಿಕತೆ ಇದ್ರೆ ಅಧಿವೇಶನದಲ್ಲಿ ಭಾಗಿಯಾಗಲಿ. ಇದು ಕುಸ್ತಿ ಮಾಡೋ ಜಾಗ ಅಲ್ಲ, ಸದನದಲ್ಲಿ ಚರ್ಚೆ ಮಾಡಲಿ. ಎಂದು ಅಶೋಕ್ ಕಿಡಿ ಕಾರಿದ್ದಾರೆ.

Leave a Reply

Your email address will not be published.