ಕೊನೆಗೂ ತನ್ನ ಅಸಲಿ ಹೆಸರು ಬಾಯಿಬಿಟ್ಟ ಟಿಕ್ ಟಾಕ್ ಸ್ಟಾರ್ ಸೋನು ಗೌಡ

ಚಲನಚಿತ್ರ

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ 6 ರಂದು ರಿಯಾಲಿಟಿ ಶೋಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಒಟ್ಟು 16 ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದು, ಇವರಲ್ಲಿ ಬಹುತೇಕರು ಹಿರಿತೆರೆ-ಕಿರುತೆರೆಯಲ್ಲಿ ಖ್ಯಾತಿ ಘಳಿಸಿದ್ದಾರೆ. ಅವರೆಲ್ಲರ ನಡುವೆ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದು ತನ್ನ ನಿಜವಾದ ಹೆಸರನ್ನು ಬಯಲು ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಎರಡನೇ ಸ್ಪರ್ದಿಯಾಗಿ ಸ್ಟೇಜ್ ಮೇಲೆ ಬಂದ ಸೋನು ಗೌಡ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೂಲತಃ ಮಂಡ್ಯದರಾದ ಸೋನು ಶ್ರೀನಿವಾಸ್ ಗೌಡ ಹಿರೋಯಿನ್ ಆಗಬೇಕೆಂದು ಕನಸು ಕಂಡು ಬೆಂಗಳೂರಿಗೆ ಬಂದವರು. ಆದರೆ ಸೋನು ಕೈ ಹಿಡಿದಿದ್ದು ಟಿಕ್ ಟಾಕ್.

ಅಂದಹಾಗೆ ಸೋನು ಶ್ರೀನಿವಾಸ್ ಗೌಡ ಅವರ ನಿಜವಾದ ಹೆಸರು, ಶಾಂಭವಿ ಶ್ರೀನಿವಾಸ ಗೌಡ ಎಂದು. ಈ ಹಿಂದೆ ಯಾರೋ ‘ಸೋನು’ ಅಂತ ಕರೆದಿದ್ದು, ಆ ನಿಕ್ ನೇಮ್ ಇಷ್ಟವಾಗಿ ಆ ಬಳಿಕ ಅದನ್ನೇ ಇಟ್ಟುಕೊಂಡೆ ಎಂದು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶಾಂಭವಿ ಗೌಡ ಬದಲಾಗಿ ಸೋನು ಗೌಡ ಎಂದು ನೀಡಿದ್ದರಿಂದ ಅದೇ ಹೆಸರು ಫೇಮಸ್ ಆಯಿತು. ಇದೀಗ ಬಿಗ್ ಬಾಸ್​ ಒಟಿಟಿ ಸೀಸನ್ 1 ರಲ್ಲೂ ಕೂಡ ಸೋನು ಗೌಡ ಆಗಿಯೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಸೋಷಿಯಲ್ ಮೀಡಿಯಾ ಸ್ಟಾರ್ ಶಾಂಭವಿ ಶ್ರೀನಿವಾಸ್ ಗೌಡ.

Leave a Reply

Your email address will not be published.