ಹಣಕಾಸು-ಹೂಡಿಕೆ ವಿಚಾರಗಳಲ್ಲಿ ಮಹಿಳೆ ಸ್ವಾವಲಂಬಿಯಾಗಬೇಕು: ರಶ್ಮಿ ರವಿಕಿರಣ್

ಬೆಂಗಳೂರು

ಬೆಂಗಳೂರು : ಮಹಿಳೆಯರು ಪುರುಷರು ಇಬ್ಬರೂ ಸಮಾನರು. ನಾವೆಲ್ಲರೂ ನಮ್ಮ ಹಕ್ಕು, ನಮ್ಮ ಗೌರವ, ನಮ್ಮ ಅವಕಾಶಗಳಿಗಾಗಿ ಒಗ್ಗೂಡಿ ಧ್ವನಿ ಎತ್ತಬೇಕಾಗಿದೆ. ಹೆಣ್ಣಿಗೆ ಸಿಗಬೇಕಾದ ಹಕ್ಕುಗಳು  ಸಿಕ್ಕ ದಿನವೇ ವ್ಯವಸ್ಥೆಯ  ಸುಧಾರಣೆಗೆ ಮುನ್ನುಡಿಯಾಗಿರುತ್ತದೆ ಎಂದು ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿ ಕಿರಣ್ ಹೇಳಿದ್ದಾರೆ. ಬೆಂಗಳೂರಿನ ನಿವಾರಾ ಹೋಮ್ ಫೈನಾನ್ಸ್ ಲಿಮಿಟೆಡ್ ಬ್ಯಾಂಕಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಹಿಳೆಯರು ಮಲ್ಟಿ ಟಾಸ್ಕ್ ಗಳನ್ನ ಮಾಡುತ್ತಾರೆ. ಮಹಿಳೆಯರ ವ್ಯಕ್ತಿತ್ವ ಬಹಳ ವಿಭಿನ್ನ. ಹೀಗಾಗಿ ಅವರನ್ನ ಪುರುಷರು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದು ಜೀವನದ ಸತ್ಯ. ಮಹಿಳೆಯರು ಪುರು ಷರು ಇಬ್ಬರೂ ಸಮಾನರು. ಪರಿವಾರದವರು ಮನೆಯಲ್ಲಿದ್ದರೂ ಮಹಿಳೆಯರು ಹೊರಗಡೆ ಕೆಲಸ ಮಾಡುತ್ತಿರುವಾಗ ಮಹಿಳೆ ಯರು ಮಾತ್ರ ಮನೆ ಜವಾಬ್ದಾರಿ ಹೊರಲಷ್ಟೇ ಸೀಮಿತ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು.

ಕೋವಿಡ್ ಸಮಯದಲ್ಲಿ ಬ್ಯಾಂಕ್ ನ ಮಹಿಳಾ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ.  ಬಹುತೇಕ ಉದ್ಯಮಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿತ್ತು. ಆದ್ರೆ ಬ್ಯಾಂಕ್ ಗಳಲ್ಲಿ ಆ ರೀತಿಯ ಅವಕಾಶವಿರಲಿಲ್ಲ. ಆಗ ಮಹಿಳಾ ಸಿಬ್ಬಂದಿಗಳು ಧೈರ್ಯವಾಗಿ ಕಚೇರಿಗೆ ಬಂದು ಕೆಲಸ ಮಾಡಿದ್ದಾರೆ. ಹೀಗಾಗಿ ಸಮಾಜದಲ್ಲಿ ಮಹಿಳೆಯರು ಪುರಷರಿಗೆ ಸಮಾನವಾಗಿ ಕೆಲಸ ಮಾಡುವ ಸಾಮಥ್ರ್ಯವನ್ನು ಬೆಳೆಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣು ತಾಕದ ಕ್ಷೇತ್ರವಿಲ್ಲ. ಹೀಗಾಗಿಯೇ ನಮ್ಮ ಸಮಾಜ ಹೆಣ್ಣನ್ನು ಅವಕಾಶಗಳಿಂದ ದೂರವಿರಿಸುತ್ತಿದೆ.  ನಮ್ಮ ಸಮಾಜ, ನಮ್ಮ ವ್ಯವಸ್ಥೆ, ನಮ್ಮ ಆಡಳಿತ ಗಂಡಿಗೆ ನೀಡುವಷ್ಟೇ ಪ್ರಾದಾನ್ಯತೆ, ಗೌರವ ಮತ್ತು ಅವಕಾಶಗಳನ್ನು ಹೆಣ್ಣಿಗೂ ನೀಡಬೇಕು. ಇದು ಲಿಂಗ ಸಮಾನತೆಯ ಪ್ರಶ್ನೆ ಮಾತ್ರವಲ್ಲ. ಒಂದು ನಾಗರೀಕ ವ್ಯವಸ್ಥೆ ಸಮತೋಲನದಲ್ಲಿರಬೇಕಿದ್ದರೇ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನ ಸ್ಥಿತಿಯಲ್ಲಿರಬೇಕು ಎಂದು ಪ್ರತಿಪಾದಿಸಿದರು.

ಇನ್ನು ಆರ್ಥಿಕವಾಗಿ ಮಹಿಳೆ ಸಬಲೆಯಾಗಬೇಕು. ಹಣಕಾಸಿನ ವಿಚಾರದಲ್ಲಿ ಆಗಿರಬಹುದು.. ಹೂಡಿಕೆ ವಿಚಾರದಲ್ಲಿ ಆಗಿರಬಹುದು. ಅಥ ವಾ ವ್ಯವಹಾರಗಳಲ್ಲಿ ಯಾರನ್ನು ಕೂಡ ಅವಲಂಬನೆ ಮಾಡದೇ ಸ್ವಾವಲಂಬಿಯಾಗಿ   ಬೆಳೆಯಬೇಕು ಎಂದು ಹೇಳಿದ್ರು. ಸಂಸಾರದ ನೊಗಕ್ಕೆ ಒಂದು ಹೆಗಲು ಗಂಡು ಕೊಟ್ಟರೆ ಇನ್ನೊಂದು ಹೆಗಲನ್ನು ಹೆಣ್ಣೂ ಕೊಡುತ್ತಾಳೆ ಅನ್ನೋದು ನಿಜವಾಗಿದ್ದಾಗ ಗಂಡಿನಷ್ಟೇ ಸಮಾನ ಅವಕಾಶಗಳು ಹೆಣ್ಣಿಗೆ ಸಿಗಲೇಬೇಕು.

ಪೂರ್ವಗ್ರಹ ಮನಸ್ಥಿತಿಯನ್ನು ಬಿಟ್ಟು ಯೋಚಿಸಿ ಹೆಣ್ಣು ಸ್ವಾವಲಂಬಿಯಾದ ದೇಶದಲ್ಲಿ ವ್ಯವಸ್ಥೆಯ ದೋಷಗಳು ತಾನಾಗಿಯೇ ಸರಿಯಾ ಗುತ್ತವೆ. ಹೆಣ್ಣು ಯಾವುದೇ ಸಮಸ್ಯೆಯನ್ನಾದರೂ ಮೂಲಕ್ಕೆ ಹೊಕ್ಕಿ ಪರಿಹಾರ ಕಂಡುಕೊಳ್ಳುತ್ತಾಳೆ. ಒಬ್ಬ ಮಹಿಳೆಯ ಚಾಕಚಕ್ಯತೆಯ ಅರ್ಧದಷ್ಟೂ ಪುರುಷನಿಗೆ ಇರುವುದಿಲ್ಲ. ನಾವೆಲ್ಲರೂ ನಮಗೆ ದಕ್ಕಬೇಕಾಗಿರುವ ಹಕ್ಕಿಗಾಗಿ ಒಗ್ಗೂಡಿ ಧ್ವನಿ ಎತ್ತಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ಆಲೋಚನೆ, ಹೊಸ ಕನಸು, ಹೊಸ ಚಿಂತನೆಗಳ ಮೂಲಕ ಹೊಸ ಭಾರತವನ್ನು ಕಟ್ಟಬೇಕಿದೆ ಎಂದು ರಶ್ಮಿ  ಅವರು ಕರೆಕೊಟ್ಟರು.

Leave a Reply

Your email address will not be published.