Home District ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ; ಅರಣ್ಯಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು; ಅರಣ್ಯ ಸೇರಿದಂತೆ ವನ್ಯ ಜೀವಿಗಳು...

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ; ಅರಣ್ಯಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು; ಅರಣ್ಯ ಸೇರಿದಂತೆ ವನ್ಯ ಜೀವಿಗಳು ಸಂಪೂರ್ಣ ಭಸ್ಮ

519
0

ವರದಿ-ಸೋಮಶೇಖರ್

ಮೈಸೂರು: ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ಎರಡು ತಿಂಗಳಿನಲ್ಲಿ ಇದು ಸತತ ಆರನೇ ಬಾರಿಗೆ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಬೆಂಕಿಯ ಜ್ವಾಲೆಯಿಂದ ವನ್ಯ ಜೀವಿಗಳನ್ನು ಬಲಿತೆಗೆದುಕೊಂಡಿದೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಕೃಷ್ಣ ಮೃಗಗಳ ಪರದಾಡುತ್ತಿವೆ.ನಂಜನಗೂಡು ತಾಲೂಕಿನ ಕೊಣನೂರು ಹಾಗೂ ಚುಂಚನಹಳ್ಳಿ ಕಿರುಅರಣ್ಯ ಪ್ರದೇಶದಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಹತ್ತಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣ ಭಸ್ಮವಾಗಿದೆ.

ಕೋಣನೂರು ಗ್ರಾಮದ ಹೊರವಲಯದಲ್ಲಿರುವ ಕಟ್ಟೆ ಮಹದೇಶ್ವರ ದೇವಸ್ಥಾನದ ಬಳಿಯ ಹಳ್ಳವೊಂದರಲ್ಲಿ ಕಾಣಿಸಿಕೊಂಡ ಬೆಂಕಿ. ಕಳೆದ 2 ಎರಡು ತಿಂಗಳಿನಲ್ಲಿ ಇದು 5ನೇ ಬಾರಿ ಕಾಣಿಸಿಕೊಂಡರುವ ಬೆಂಕಿ. ಕಾಡುಪ್ರಾಣಿಗಳ ಮೇವಿಗೆ ಆಹಾರವಾಗಿದ್ದ ಅರಣ್ಯ ಪ್ರದೇಶ ಸಂಪೂರ್ಣ ಭಸ್ಮವಾಗಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಮತ್ತು ಕೃಷ್ಣ ಮೃಗಗಳ ಪರದಾಡುತ್ತಿವೆ. ಅರಣ್ಯ ಪ್ರದೇಶದಲ್ಲಿದ್ದ ನೀಲಗಿರಿ, ಬೇವು, ಗಂಧದ ಮರಗಳು ಬೆಂಕಿಗಾಹುತಿ. ಕೊನೆಯ ವರೆಗೂ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆಯ ಅಧಿಕಾರಿಗಳು. ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ದ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Previous articleಇಂದು ಸಿದ್ಧಗಂಗಾ ಶ್ರೀಗಳ 114 ನೇ ಜನ್ಮಜಯಂತಿ; ಸಿದ್ಧಗಂಗಾ ಮಠದಲ್ಲಿ ವಿಶೇಷ ಆಚರಣೆ
Next articleಮಹಿಳೆಯಿಂದ ಖಾಸಗಿ ವೈದ್ಯನಿಗೆ ಚಪ್ಪಲಿ ಪೂಜೆ!

LEAVE A REPLY

Please enter your comment!
Please enter your name here