ಕಾಲು ಜಾರಿ ಹೊಳೆಗೆ ಬಿದ್ದು ಬಾಲಕಿ ಸಾವು: ಇಂದು ಅಂತ್ಯಕ್ರಿಯೆ

ಅಪರಾಧ ಜಿಲ್ಲೆ

ಉಡುಪಿ: ಕಾಲು ಜಾರಿ ಹೊಳೆಗೆ ಬಿದ್ದು ಬಾಲಕಿ ಸನ್ನಿಧಿ ಮೃತಪಟ್ಟ ಹಿನ್ನೆಲೆ ಮನೆಯ ಸಮೀಪವೇ ಸನ್ನಿಧಿ (೦೭)ಅಂತ್ಯಕ್ರಿಯೆ ನಡೆಯಲಿದೆ. ಸರ್ಕಾರಿ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಕಿ ಅಂತ್ಯಕ್ರಿಯೆ ನಡೆಯಲಿದೆ.

ಕಳೆದ ಸೋಮವಾರ ಸಂಜೆ ಸನ್ನಿಧಿ ನೀರುಪಾಲಾಗಿದ್ದಳು. ಕಾಲು ಸಂಕ(ಸೇತುವೆ) ದಾಟುವ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಘಟನೆ ನಡೆದಿತ್ತು. ನಲವತ್ತೆಂಟು ಗಂಟೆಗಳ ಕಾಲ ಹುಡುಕಾಟ ಬಳಿಕ ಬಿದ್ದ ಸ್ಥಳದಿಂದ ಕೆಲವೇ ದೂರದ ಮೃತದೇಹ ಪತ್ತೆಯಾಗಿತ್ತು.

Leave a Reply

Your email address will not be published.