ಮೋಜು-ಮಸ್ತಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಕಳ್ಳ ಅರೆಸ್ಟ್..!

ಅಪರಾಧ ಬೆಂಗಳೂರು

ಬೆಂಗಳೂರು: ಮೋಜು-ಮಸ್ತಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಕಳ್ಳನನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶೋಯಬ್ ಖಾನ್ ಅಲಿಯಾಸ್ ಹಾತ್ ತುಟ್ಟ ಅಲಿಯಾಸ್ ಟ್ಯಾಬ್ ಡೌವ್  ಬಂಧಿತ ಬೈಕ್ ಕಳ್ಳ. ಈ ಆರೋಪಿಯು ತನ್ನ ಮೋಜು, ಮಸ್ತಿ ಮತ್ತು ಐಷರಾಮಿ ಜೀವನಕ್ಕಾಗಿ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆ.ಆರ್.ಪುರ, ಮಹದೇವ ಪುರ, ವೈಟ್‍ಫೀಲ್ಡ್, ರಾಮಮೂರ್ತಿನಗರ, ಬಯ್ಯಪ್ಪನಹಳ್ಳಿ ಹೆಣ್ಣೂರು,

ಎಚ್‍ಎಎಲ್, ಸಿದ್ದಾಪುರ, ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವಲಹಳ್ಳಿ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿನ ರಸ್ತೆಗಳ ಪಕ್ಕದಲ್ಲಿ ಮನೆ ಅಂಗಡಿಗಳ ಮುಂಭಾಗ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಬಂಧಿತನಿಂದ 9 ಲಕ್ಷ ರೂ. ಮೌಲ್ಯದ 19 ಬೈಕ್‍ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.