ಆಟೋ ನಿಲ್ಲಿಸುವ ವಿಚಾರಕ್ಕೆ ಜಗಳ: ಮಹಿಳೆಗೆ ಚಾಕು ಇರಿಯಲು ಯತ್ನ

ಅಪರಾಧ ಜಿಲ್ಲೆ

ಹುಬ್ಬಳ್ಳಿ; ಅಟೋ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಟೋ ಓರ್ವನ ಜೊತೆಗೆ ಜಗಳ ಮಾಡಿಕೊಂಡಾಗ  ಹೆಂಡತಿ ನಡುವೆ ಪ್ರವೇಶ ಮಾಡಿದಾಗ ಓರ್ವನಿಗೆ ಚಾಕು ಚುಚ್ಚಿ ಗಾಯವಾದ ಘಟನೆ ತಡರಾತ್ರಿ  ಹಳೆ ಹುಬ್ಬಳ್ಳಿಯ  ಹಳೇಹುಬ್ಬಳ್ಳಿ 2 ನೇ ಕ್ರಾಸ್ ಸವಾಶಿವನಗರದಲ್ಲಿ ನಡೆದಿದೆ.

ಜಾಕೀರ ಕಾಶಿಮಸಾಬ ತಡಕಲ್ ಸಹ ಆಟೋ ಚಾಲಕನಾಗಿದ್ದು  ರಾತ್ರಿ  ಪಿರ್ಯಾದಿ ಮನೆ ಮುಂದೆ ತನ್ನಆಟೋ ಸರಿಯಾಗಿ ನಿಲ್ಲಿಸುವಾಗ ಆರೋಪಿ ಸದೀಮ ಖವಾಸ ಈತನು ಜೋರಾಗಿ ತನ್ನ ಆಟೋ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಕಾಲಿನ ಮೇಲೆ ಹಾಯಿಸಿದ ಈ ಬಗ್ಗೆ ಜಾಕೀರ ತಡಕಲ್  ಕೇಳಿದ್ದಕ್ಕೆ ಇವನೊಂದಿಗೆ ಜಗಳ  ತೆಗೆದು ಜಾಕೀರ ತಡಕಲ್ ಹಾಗೂ ಇತನ‌ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ,

ಚಾಕುವಿನಿಂದ ಜಾಕೀರನ  ಹೆಂಡತಿಗೆ  ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ.  ತಕ್ಷಣ  ಪಿರ್ಯಾದಿಯು ಚಾಕುವಿನ ತುದಿಯನ್ನು ಹಿಡಿದಿದ್ದು, ಆಗ ಆರೋಪಿ ನದೀಮ್ ಕವಾಸ್  ಜಾಕಿರ್ ಹಿಡದಿದ್ದನ್ನು ನೋಡಿದವನೇ  ಚಾಕುವನ್ನು ರಭಸವಾಗಿ ಏಳೆದಿದ್ದರಿಂದ  ಬಲಗೈ ತೊರಬೆರಳಿಗೆ, ಕಿರುಬೆರಳಿಗೆ ಬಾಕು ಚುಚ್ಚಿ ರಕ್ತಗಾಯವಾಗಿದೆ.ಜಾಕೀರ್ ನನ್ನ  ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸಿಗೆ ದಾಖಲು ಮಾಡಲಾಗಿದೆ. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.