ಪ್ರಿಯಕರನಿಗಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಯುವತಿ ಜೈಲಿಗೆ

ಅಂತರಾಷ್ಟ್ರೀಯ ಅಪರಾಧ

ಭಾರತದಲ್ಲಿರುವ ಪ್ರಿಯಕರನನ್ನು ನೋಡಲು ಅನುಮತಿ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಇಂಡೋ ನೇಪಾಳದ ಸೀತಾಮರ್ಹಿಯ ಗಡಿಯಲ್ಲಿ ಬಂಧಿಸಿದ್ದು ಇದೀಗ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಖದೀಜಾ ನೂರ್ ಬಂಧಿತ ಪಾಕ್ ಮಹಿಳೆ. ಖಲಿಜಾ ನೂರ್ ಬಳಿ ಪಾಸ್ ಪೋರ್ಟ್ ಇದ್ದರು ವೀಸಾ ಹೊಂದಿರಲಿಲ್ಲ. ತನ್ನ ಪ್ರಿಯಕರನನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದ ಈಕೆ ಮೊದಲು ದುಬೈಗೆ ಹೋಗಿದ್ದಾಳೆ. ಅಲ್ಲಿಂದ ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಮೂರು ದಿನ ತಂಗಿದ್ದು ಬಳಿಕ ನೇಪಾಳಿ ಯುವಕ ಮತ್ತು ತನ್ನ ಪ್ರಿಯಕರನ ಸಹೋದರನೊಂದಿಗೆ ಭಾರತವನ್ನು ಪ್ರವೇಶಿಸುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ SSB ಬಲೆಗೆ ಬಿದ್ದಿದ್ದಾಳೆ.

ಆಗಸ್ಟ್ 8 ರಂದು ಪಾಕಿಸ್ತಾನಿ ಯುವತಿ ಖಲೀದಾ ನೂರ್ ಅವರನ್ನು ನೇಪಾಳದ ಸೀತಾಮರ್ಹಿಯ ಭಿಟ್ಟಾ ಮೋರ್‌ನಿಂದ ಎಸ್‌ಎಸ್‌ಬಿ ಬಂಧಿಸಿತ್ತು ಎಂಬುದು ಗಮನಾರ್ಹ. ಇದಕ್ಕೂ ಮುನ್ನ ನೇಪಾಳ ಗಡಿಯಲ್ಲಿ ಚೀನಾದ ಪ್ರಜೆಯೊಬ್ಬನನ್ನು ಬಂಧಿಸಿರುವ ಬಗ್ಗೆ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿತ್ತು. ಇಂತಹ ಹೊತ್ತಿನಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳ ಬಂಧನದಿಂದ ಭಾರತ ಮತ್ತು ನೇಪಾಳದ ಭದ್ರತೆಯ ಬಗ್ಗೆ ಮತ್ತೊಮ್ಮೆ ದೊಡ್ಡ ಪ್ರಶ್ನೆ ಉದ್ಭವಿಸಿದೆ.

ಪಾಕಿಸ್ತಾನಿ ಯುವತಿಯಿಂದ ಎಟಿಎಂ ಕಾರ್ಡ್, ನೇಪಾಳಿ ಮತ್ತು ಪಾಕಿಸ್ತಾನಿ ಮೊಬೈಲ್ ಸಿಮ್ ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನಿ ಯುವತಿಯೊಂದಿಗೆ ಇಬ್ಬರು ಯುವಕರನ್ನು ಸಹ ಎಸ್‌ಎಸ್‌ಬಿ ವಶಕ್ಕೆ ತೆಗೆದುಕೊಂಡಿದೆ. ಒಬ್ಬ ಯುವಕ ಹೈದರಾಬಾದ್ ಮೂಲದವನಾಗಿದ್ದು, ಮತ್ತೊಬ್ಬ ಯುವಕ ನೇಪಾಳ ಮೂಲದವನು ಎನ್ನಲಾಗಿದೆ. SSB ಎಲ್ಲರನ್ನೂ ವಿಚಾರಣೆಗೊಳಪಡಿಸಿ ತನಿಖೆ ನಡೆಸುತ್ತಿದೆ.

ಮದುವೆ ನಿರ್ಧಾರಕ್ಕೆ ತಂದೆ-ತಾಯಿ ಇಬ್ಬರೂ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ, ನೂರ್ ಪಾಕಿಸ್ತಾನದಿಂದ ಭಾರತಕ್ಕೆ ಬರಲು ನಿರ್ಧರಿಸಿದಾಗ. ಪೊಲೀಸರ ಪ್ರಕಾರ, ಆರಂಭದಲ್ಲಿ ಇದು ಬೇಹುಗಾರಿಕೆಯ ಪ್ರಕರಣ ಎಂದು ಗಡಿ ಪೊಲೀಸರು ಶಂಕಿಸಿದ್ದಾರೆ, ವಿಚಾರಣೆ ಬಳಿಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.