ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ

ಜಿಲ್ಲೆ

ಹಾವೇರಿ :ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತಪಟ್ಟಿರೋ ನವೀನ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ ನಿವಾಸಕ್ಕೆ ಬಿಎಸ್​ವೈ ಭೇಟಿ ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ ನಾಲ್ಕನೆ ವರ್ಷ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಹುತಾತ್ಮರಾಗಿದ್ದರೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. ಯುದ್ಧದ ಗಂಭೀರತೆ ಅಲ್ಲಿ ಜಾಸ್ತಿ ಇದೆ.

ತಕ್ಷಣ ಡೆಡ್ ಬಾಡಿ ತರುವುದಕ್ಕೆ ಆಗದೆ ಸಮಸ್ಯೆ ಆಗ್ತಿದೆ. ಪ್ರಧಾನಿ ಮೋದಿಜಿಯವರೆ ಮೃತ ದೇಹ ತರಲು ಚಿಂತನೆ ನಡೆಸಿದ್ದಾರೆ. ವಿಶೇ ಷ ವಿಮಾನದಲ್ಲಿ ಮೃತ ದೇಹ ತರೋ ಚಿಂತನೆ ನಡೆದಿದೆ. ಪಾರ್ಥೀವ ಶರೀರದ ಮುಖ ನೋಡಬೇಕು ಅನ್ನೋದು ತಂದೆ- ತಾಯಿ ಬಯಕೆ. ಪ್ರಧಾನಿ ಜೊತೆ ನಾನು, ಸಿಎಂ ಬೊಮ್ಮಾಯಿಯವರು ಮಾತನಾಡಿದ್ದೇವೆ. ಆದಷ್ಟು ಬೇಗ ಮೃತ ದೇಹ ತರೋದು ಕೇಂದ್ರ ಮತ್ತು ರಾಜ್ಯ ಸರಕಾರದ ಕರ್ತವ್ಯ. ಅವರ ನೋವಿಗೆ, ಕಣ್ಣೀರಿಗೆ ಸಾಂತ್ವನ ಹೇಳಲು ಪದಗಳು ಬರುತ್ತಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Leave a Reply

Your email address will not be published.