ಹಿಂದೂ ಕಾರ್ಯಕರ್ತನ ಕೊಲೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೇಸರ

ಬೆಂಗಳೂರು

ಬೆಂಗಳೂರು: ಹಿಂದೂ ಕಾರ್ಯಕರ್ತನ ಕೊಲೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಖಂಡರು ಆ ಯುವಕನ ಮನೆಗೆ ಹೋಗುವುದು, ಸಾಂತ್ವನ ಹೇಳುವುದು ಮಾಡ್ತಾರೆ. ಮೂರು ದಿನ ಆದ್ಮೇಲೆ ಅತ್ತ ಯಾರೂ ಸುಳಿಯಲ್ಲ. ಆ ಅಮಾಯಕನ ಕುಟುಂಬದ ಬಗ್ಗೆ ಕೇಳುವವರಿರಲ್ಲ. ಮಕ್ಕಳು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ತಮ್ಮ ಕುಟುಂಬದ ಬಗ್ಗೆ ಯಾರೂ‌ ನೋಡಲ್ಲ. ಇದನ್ನ ಮಕ್ಕಳು ಅರ್ಥ ಮಾಡಿಕೊಂಡರೆ ಸಾಕು. ಇನ್ನೂ ಡಿಕೆಶಿ ಪ್ರಚೋದನೆ ಮಾಡ್ತಾರೆ ಅನ್ನೋದು ಹೇಳ್ತೀರಾ? ಅದನ್ನ ಹೇಗೆ ಕಟ್ ಮಾಡಬೇಕು ಅಂತ ನಿಮಗೆ ಗೊತ್ತಿಲ್ವಾ? ಯಾಕೆ ನೀವು ಸುಮ್ಮನಾಗಿದ್ದು ಎಂದು ಸರ್ಕಾರವನ್ನು ಎಚ್ ಡಿ ಕುಮಾರಸ್ವಾಮಿ  ಪ್ರಶ್ನಿಸಿದ್ದಾರೆ.

Leave a Reply

Your email address will not be published.