ನಾಲ್ಕು ದಿನದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೀರಿನ ಕಣಿವೆಯಲ್ಲಿ ಶವವಾಗಿ ಪತ್ತೆ..!

ಜಿಲ್ಲೆ

ಹುಬ್ಬಳ್ಳಿ: ಯುವಕನೊರ್ವ ತುಂಬಿದ ನೀರಿನ ಕಣಿವೆಗೆ ಹಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಹೊರವಲಯದ ಕಣಿವೆಯಲ್ಲಿ ನಡೆದಿದೆ. ಶಶಾಂಕ ಮಾಗಡಿ (21) ಮೃತ ಯುವಕ, ಈತ ಕಾಲೇಜು ಶಿಕ್ಷಣದ ಜೊತೆಗೆ ಕಂಪ್ಯೂಟರ್ ತರಭೇತಿಯನ್ನು ಪಡೆಯುತ್ತಿದ್ದನು. ಆದರೆ ಫೆ.28 ರಂದು ಈತನ ತಂದೆ ನಡೆಸುತ್ತಿದ್ದ ಕಂಪ್ಯೂಟರ್ ಅಂಗಡಿಯಿಂದ ಮನೆಗೆ ಹೋಗುವುದಾಗಿ ಹೇಳಿ ಮನೆಗೆ ಬರದೇ ಕಾಣೆಯಾಗಿದ್ದನು. ಶಶಾಂಕನಿಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು ಊರಿನ ಕಣಿವೆಯಲ್ಲಿ ಶವವೊಂದು ತೇಲಾಡುತ್ತಿರುವುದನ್ನು ಗಮನಿಸಿದ ದಾರಿಹೋಕರು ಮೃತ ಶಶಾಂಕ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ತದನಂತರ ಮೃತದೇಹವನ್ನು ಕುಟುಂಬಸ್ಥರು ಗುರುತು ಮಾಡಿದ್ದಾರೆ. ಘಟನೆಗೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೋಲಿಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಘಟನೆಗೆ ಕಾರಣವೇನೆಂಬುದು ನಿಖರವಾಗಿ ತಿಳಿದುಬಂದಿಲ್ಲ.

Leave a Reply

Your email address will not be published.