ಮಕ್ಕಳಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ

ಬೆಂಗಳೂರು

ಬೆಂಗಳೂರು: ಕೆಆರ್ ಪುರ ಕ್ಷೇತ್ರದ ವಿಜಿನಾಪುರ ವಾರ್ಡನ ಖಾದಿಬಂಡಾರದ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಸೂಚನೆಯಂತೆ ಬೂಸ್ಟರ್ ಡೋಸ್ ಹಾಗೂ 12 ಮೇಲ್ಪಟ್ಟ ಮಕ್ಕಳಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ನೂರಾರು ವಿದ್ಯಾರ್ಥಿಗಳು ಬಂದು ಲಸಿಕೆಯನ್ನ ಪಡೆದರು.ನಂತರ ಮಾತನಾಡಿದ ವಿಜಿನಾಪುರ ವಾರ್ಡನ ಬಿಜೆಪಿ ಮುಖಂಡ ಬಾಬು ಸೆಲ್ವಂ ಮಾತನಾಡಿ, ಮಹಾಮಾರಿ ಕರೋನವನ್ನು ತಡೆಯಲು ಲಸಿಕೆ ಒಂದೇ ಅಸ್ತ್ರವಾಗಿದೆ ಅದ್ದರಿಂದ ಪ್ರತಿಯೊಬ್ಬರು ತಪ್ಪದೆ ಲಸಿಕೆ ಪಡೆದುಕೊಳ್ಳುವಂತೆ ಕರೆ ನೀಡಿದರು .

 

ಕೋವಿಡ್ ಆರಂಭದಿಂದಲೂ ಸಾವಿರಾರು ಜನರಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ,ಬೂಸ್ಟರ್ ಡೋಸ್ ಹಾಗೂ 12 ಮೇಲ್ಪಟ್ಟವರಿಗೂ ಲಸಿಕೆ ಪಡೆದುಕೊಳ್ಳಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಪ್ರತಿಯೊಬ್ಬರೂ ಮತ್ತೆ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಇನ್ನೂ ಕೋವಿಡ್ ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ಗಳು ಇಲ್ಲಿ ಪ್ರತಿದಿನ ಲಭ್ಯವಿದ್ದು ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯಮುಖಂಡ ಎಚ್.ಎಸ್. ಅಮಾನುಲ್ಲಾ, ಸೂರ್ಯಕುಮಾರ್, ವಾರ್ಡನ ಅಧ್ಯಕ್ಷ ಗೋಪಾಲಣ್ಣ, ಉಪಾಧ್ಯಕ್ಷ ರಾಜು, ಪ್ರಧಾನಕಾರ್ಯದರ್ಶಿ ಕೇಬಲ್ ಸುರೇಶ್ ,ಎಸ್.ಎಲ್.ಎನ್.ಸುರೇಶ್,ಶ್ರೀಕಾಂತ್,ಕೃಷ್ಣ ಹಾಗೂ ಬಿಜೆಪಿ ಮುಖಂಡರು ಇದ್ದರು.

Leave a Reply

Your email address will not be published.