ಫ್ರೋ ಕಬಡ್ಡಿ ಪಂದ್ಯಾವಳಿ: ಪ್ಲೇ ಆಫ್ ತಲುಪಿದ ಬೆಂಗಳೂರು ಬುಲ್ಸ್

ಕ್ರೀಡೆ

ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಫ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಪ್ರೋ ಕಬಡ್ಡಿ ಕೊನೆ ಹಂತಕ್ಕೆ ತಲುಪುತ್ತಿದ್ದಂತೆ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಲೀಗ್‌ ಹಂತದ ಅಂತಿಮ ದಿನದಾಟದಲ್ಲಿ ಪುನೇರಿ ಪಲ್ಟಾನ್‌ ಹಾಗೂ ಗುಜರಾತ್‌ ಜೈಂಟ್ಸ್‌ ಗೆಲುವಿನ ನಗೆ ಬೀರಿದೆ. ಪ್ಲೇ ಆಫ್​ಗೆ ಆರು ತಂಡಗಳು ಲಗ್ಗೆಯಿಟ್ಟಿದ್ದು, ಅದ್ರಲ್ಲೂ ಅಂಕ ಪಟ್ಟಿಯಲ್ಲಿ ಬೆಂಗಳೂರು ಬೂಲ್ಸ್​ ಐದನೇ ಸ್ಥಾನದಲ್ಲಿರುವುದರಿಂದ ಪ್ಲೇ ಆಫ್ ಟಿಕೆಟ್‌ ಸಿಕ್ಕಿದೆ. ಪಾಟ್ನಾ ವಾರಿಯರ್ಸ್​ 86 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ರೆ, ದಬಾಂಗ್ ದೆಲ್ಲಿ 75 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಯುಪಿ ಯೋಧ 68 ಅಂಕ, ಗುಜರಾತ್ ಟೈಟಾನ್ಸ್ 67 ಅಂಕ, ಬೆಂಗಳೂರು ಬುಲ್ಸ್​ 66 ಅಂಕ ಹಾಗೂ ಪುನೇರಿ ಪಲ್ಟಾನ್ 66 ಅಂಕಗಳನ್ನ ಪಡೆದುಕೊಂಡಿವೆ.

Leave a Reply

Your email address will not be published.