ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಗೆ ಸೈಡ್ ಎಫೆಕ್ಟ್ ಆಗುತ್ತದೆ: ಮಾಜಿ ಸಿಎಂ ಶೆಟ್ಟರ್

ಜಿಲ್ಲೆ

ಹುಬ್ಬಳ್ಳಿ :ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ತೊಂದರೆ ಆಗುವುದಿಲ್ಲ . ಅದ್ರಿಂದ ಕಾಂಗ್ರೆಸ್ ಗೆ ಸೈಡ್ ಎಫೆಕ್ಟ್ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಈ ಹಿಂದೆ ಸಿದ್ದರಾಮೋತ್ಸ ವದಂತಹ ಸಮಾವೇಶಗಳು, ಕಾರ್ಯಕ್ರಮಗಳು ಆಗಿ ಹೋಗಿವೆ. ಅವುಗಳಿಂದ ಬಿಜೆಪಿಗೆ ಏನು ತಟ್ಟಿಲ್ಲ . ಇನ್ನು ಜಮೀರ್ ಅಹ್ಮದ್ ಮತ್ತು ಡಿಕೆಶಿ ತಪ್ಪು ಮಾಡಿಲ್ಲಾ ಅಂದ್ರೆ ಯಾಕೆ ಹೆದರಬೇಕು .

ನೀವು ಸಾಚಾ ಇದ್ರೆ ಕಾನೂನು ಹೋರಾಟ ಮಾಡಿ , ರಾಹುಲ್ ಗಾಂಧಿ , ಸೋನಿಯಾ ಗಾಂಧಿ ಅವರು ನ್ಯಾಶನಲ್ ಹೆರಾಲ್ಡ್ ಪ್ರಕರಣ ದಲ್ಲಿ ಏನೂ ಅಕ್ರಮ ಎಸಗಿಲ್ಲ ಅಂದ್ರೆ ಯಾಕೆ ಹೆದರುತ್ತೀರಿ ಕೋರ್ಟ್ ಕಚೇರಿ ಇವೆ ಹೋರಾಟ ಮಾಡಿ ಅದನ್ನೆಲ್ಲ ಬಿಟ್ಟು ರಾಜಕೀಯ ಕಾರಣ ಹುಡುಕುವುದು ಬೇಡ ಎಂದರು  ರಾಜ್ಯಕ್ಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಂದಿರುವ ಹಿನ್ನೆಲೆಯಲ್ಲಿ , ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಬಗ್ಗೆ ಚರ್ಚೆ ಮಾಡಿ ಹೋಗಿದ್ದಾರೆ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು .

Leave a Reply

Your email address will not be published.