
ಇಂದಿನಿಂದ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ: ಫ್ಲವರ್ ಶೋ ಗೆ CM ಬೊಮ್ಮಾಯಿ ಚಾಲನೆ
ಬೆಂಗಳೂರು: ಇಂದಿನಿಂದ ಆಗಸ್ಟ್ 15 ರ ತನಕ ಲಾಲ್ ಬಾಗ್ ನಲ್ಲಿ ನಡೆಯಲಿರುವ ಪ್ಲವರ್ ಶೋಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ಡಾ. ರಾಜ್, ಹಾಗೂ ಪುನೀತ್ ಪ್ರತಿಮೆಗೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ ಮಾಡಿ ಗೌರವಿಸಿದರು. ಇಂದಿನಿಂದ ಆಗಸ್ಟ್ 15ರವರೆಗೆ ಪುಷ್ಪ ಪ್ರದರ್ಶನ ನಡೆಯಲಿದೆ.
ಡಾ.ರಾಜ್ ಮತ್ತು ಪುನೀತ್ ಕುರಿತ ಹತ್ತಾರು ಆಕರ್ಷಣೆಗಳು ಈ ಪ್ರದರ್ಶನದಲ್ಲಿರಲಿವೆ. ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ ಹೂಗಳು ಅರಳಲಿದೆ. ಇನ್ನೂ ಪ್ಲವರ್ ಶೋಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ ಸಂದರ್ಭದಲ್ಲಿ ತೋಟಗಾರಿಕ ಸಚಿವ ಮುನಿರತ್ನ ನಟರಾದ ಡಾ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಉಪಸ್ಥಿತರಿದ್ದರು.