Home District ಕೊರೊನಾ ಹರಡಬಾರದು ಎಂದು ಸ್ವಯಂ ಕ್ವಾರಂಟೈನ್ ;  ಊರ ಹೊರಗೆ ಟೆಂಟ್ ಹಾಕಿಕೊಂಡ ಯೋಧ….

ಕೊರೊನಾ ಹರಡಬಾರದು ಎಂದು ಸ್ವಯಂ ಕ್ವಾರಂಟೈನ್ ;  ಊರ ಹೊರಗೆ ಟೆಂಟ್ ಹಾಕಿಕೊಂಡ ಯೋಧ….

297
0
SHARE

ಗದಗ. ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಟೆಂಟ್ ಹಾಕಿಕೊಂಡಿರೋ ಯೋಧ..ಸೈನ್ಯದಿಂದ ರಜೆಯೆ ಮೇಲೆ ಊರಿಗೆ ಬಂದಿರೋ ಸೈನಿಕ..ಕೊರೊನಾ ಹರಡಬಹುದು ಎನ್ನೋ ಭೀತಿಯಿಂದ ಗ್ರಾಮದ ಒಳಗೆ ಬಾರದಿರಲು ಇರಲು ನಿರ್ಧಾರ ಮಾಡಿದ್ದಾನೆ ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿ. ಗ್ರಾಮದ ಪ್ರಕಾಶ್ ಹೈಗರ್ ಎನ್ನುವ ಯೋಧ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಅರುಣಾಚಲ ಪ್ರದೇಶದಿಂದ ಜುಲೈ 3 ಕ್ಕೆ ಗ್ರಾಮಕ್ಕೆ ವಾಪಾಸ್ಸ್ ಆಗಿದ್ದಾನೆ. ವಿಮಾನದ ಮೂಲಕ ಬಂದ ಈ ಯೋಧನಿಗೆ ಕೊವಿಡ್-19 ಟೆಸ್ಟ್ ಮಾಡಲಾಗಿದೆ.

ವರದಿ‌ ಸಹ ನೆಗೆಟಿವ್ ಬಂದಿದ್ದು, 14 ದಿನಗಳ ಕಾಲ್ ಹೋಮ್ ಕ್ವಾರಂಟೈನ್ ಆಗುವಂತೆ ಆರೋಗ್ಯ ಇಲಾಖೆ‌‌ ಸೂಚನೆ ನೀಡಿತ್ತು. ಆದರೆ ಯೋಧ ಪ್ರಕಾಶ್ ತನ್ನಿಂದಾಗಿ ತನ್ನ ಅವಿಭಕ್ತ ಕುಟುಂಬ ಹಾಗೂ ಗ್ರಾಮಕ್ಕೆ ತೊಂದರೆಯಾಗಬಾರದೆಂದು ಗ್ರಾಮದಿಂದ 2 ಕಿಲೋಮೀಟರ್ ದೂರದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದಾನೆ. ಮಕ್ಕಳು, ಪತ್ನಿ, ತಂದೆ ತಾಯಿ ಸೇರಿದಂತೆ 15 ಕ್ಕೂ ಹೆಚ್ಚು ಜನ ಮನೆಯಲ್ಲಿದ್ದಾರೆ. ಹಾಗೇ ಗ್ರಾಮದ ಜನರಿಗೆ ನನ್ನಿಂದ ತೊಂದರೆಯಾಗಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳ್ತಾರೆ.

ಪ್ರಕಾಶ್ ಪ್ರಸ್ತುತ ಜಮೀನಿನಲ್ಲಿ ವಾಸ್ತವ್ಯ ಮಾಡುತ್ತಿದ್ದು, ಮನೆಯಿಂದ ಊಟವನ್ನು ತಂದು‌‌ ಕೊಡುತ್ತಾರೆ,‌ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ತನ್ನ ಸುತ್ತಲೂ ಬೇಲಿ ಹಾಕಿಕೊಂಡು ಇನ್ನೊಬ್ಬರಿಗೆ ತೊಂದರೆ ನೀಡದ ಸ್ವಯಂ ಕ್ವಾರಂಟೈನ್ ಆಗಿದ್ದಾರೆ ಯೋಧ ಪ್ರಕಾಶ್. ಬೆಂಗಳೂರಿನಿಂದ ಬಂದ ಕೂಡಲೇ ಮನೆಗೆ ಹಾಗೂ ಊರಿಗೆ ಹೋಗದೆ ಜಮೀನಿಗೆ ಬಂದ ಪ್ರಕಾಶ್, ಅವರ ಸಹೋದರನಿಗೆ ಹೇಳಿ ಟ್ರ್ಯಾಕ್ಟರ್ ನ ಟ್ರೇಲರ್ ನಲ್ಲಿ ತಾಡಪಾಲ್ ಹಾಕಿಸಿಕೊಂಡು ಅದರ ಸುತ್ತು ಬೇಲಿ ಹಾಕಿ, ಕಳೆದ 6 ದಿನಗಳಿಂದ ತನ್ನಷ್ಟಕ್ಕೇ ತಾನೇ ದಿಗ್ಭಂಧನ ಹಾಕಿಕೊಂಡಿದ್ದಾನೆ.

ಭಾರತ ಚೀನಾ ಗಡಿ ಲಡಾಕ್ ನ  ಯುದ್ಧ ಭೂಮಿ ಸೇರಿದಂತೆ, ನಾನಾ ಕಡೇ ಕೆಲಸ ನಿರ್ವಹಣೆ ಮಾಡಿದ್ದಾರೆ. 30 ದಿನಗಳ ಕಾಲ ರಜೆ ಬಂದಿರುವ ಯೋಧ 14 ದಿನಗಳ ಕಾಲ ಒಂಟಿಯಾಗಿ ಕ್ವಾರಂಟೈನ್ ನಲ್ಲಿದ್ದಾನೆ. ಕ್ವಾರಂಟೈನ್ ಸಮುಯ ಮುಗಿದ ಬಳಿ ತನ್ನ ಮಕ್ಕಳು ಹಾಗೂ ಕುಟುಂಬ ಭೇಟಿ ಮಾಡಲಿದ್ದಾನೆ. ಯೋಧನ ಈ ನಡೆ ಗ್ರಾಮಸ್ಥರ ಮೆಚ್ಚುಗೆಗೂ ಕಾರಣವಾಗಿದೆ.ಇನ್ನು ಸದ್ಯ ಈ ಯೋಧನ ವರದಿ ನೆಗೆಟಿವ್ ಬಂದಿದ್ದು, ಎಲ್ಲರ ಸಮಾಧನಕ್ಕೆ ಕಾರಣವಾಗಿದೆ. ಆದ್ರೂ ಸಹ ಆರೋಗ್ಯ ಇಲಾಖೆಯ ಸೂಚನೆಯಂತೆ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿಯೇ‌ ಗ್ರಾಮದ ಒಳಗೆ ಬರ್ತೀನಿ ಎನ್ನೋದು ಯೋಧನ ಮಾತು. ಗಡಿಯಲ್ಲಿ ಹಾಗೂ ಗ್ರಾಮದಲ್ಲಿ ಎರಡೂ ಕಡೆ ಜನರ ಒಳಿತನ್ನು ಬಯಸೋ ಇಂತಹ ಯೋಧರಿಗೆ ಸಲಾಂ ಹೇಳಲೇಬೇಕಲ್ಲ.

LEAVE A REPLY

Please enter your comment!
Please enter your name here