ಬಾಡಿ ಬಿಲ್ಡಿಂಗ್ ಅಥವಾ ದೇಹದಾಡ್ಯ ಕ್ರೀಡೆ ಬಹುಶಃ ಎಲ್ಲರಿಗೂ ಅಗತ್ಯವಾಗಿದೆ. ಆದರೆ ಹೆಚ್ಚಿನವರಿಗೆ ತಲುಪದ ಕ್ರೀಡೆ ಬಾಡಿ ಬಿಲ್ಡಿಂಗ್. ಇದರ ಆರಾಧಕರಿಂದ ಹಿಡಿದು ಹೊರಗಿನವರಿಗೂ ಇರುವ ತಪ್ಪು ಕಲ್ಪನೆಗಳು ಅಪಾರ. ಇದರಿಂದಾಗಿಯೇ ಬಾಡಿ ಬಿಲ್ಡಿಂಗ್ ನಮ್ಮ ದೇಶದಲ್ಲಿ ಕ್ರೀಡೆಯಾಗಿ ಇನ್ನೂ ಜನಪ್ರಿಯತೆ ಪಡೆದಿಲ್ಲ.
ಚಿಕ್ಕ ವಯಸ್ಸಿನಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ಕ್ರೀಡೆಯಲ್ಲಿ ಭಾಗವಹಿಸಿದ್ದೇವೆ, ಅಂದರೆ ಆಟವಾಡಿದ್ದೇವೆ ಗಲ್ಲಿ ಕ್ರಿಕೆಟ್ ನಿಂದ ಹಿಡಿದು ಗಿಲ್ಲಿ ದಾಂಡು ವರೆಗೂ ಕೋ- ಕೋ ಯಿಂದ ಹಿಡಿದು ಕಬಡ್ಡಿ, ಫುಟ್ಬಾಲ್, ಹಾಕಿ, ಗೋಲಿಯಾಟ, ಗಿಲ್ಲಿ ದಾಂಡು ಹೀಗೆ ನಮ್ಮನ್ನು ನಾವು ಇಷ್ಟವಾದ ಆಟಗಳಲ್ಲಿ ತೊಡಗಿಸಿಕೊಂಡಿದ್ದೇವೆ ಈ ಆಟಗಳಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಲ್ಲ ಹಾಗೆಯೇ ಈ ಬಗ್ಗೆ ನಮಗೆ ಸಂಪೂರ್ಣ ವಿವರಗಳು ಅರ್ಥವಾಗದಿದ್ದರೂ ಆ ಆಟಗಳ ಬಗ್ಗೆ ನಮಗೆ ತಪ್ಪು ಕಲ್ಪನೆಗಳೇನು ಒಂದಲ್ಲ
ಆದರೆ ಬಾಡಿ ಬಿಲ್ಡಿಂಗ್ ಪರಿಸ್ಥಿತಿ ಇದಲ್ಲ. ಬಾಡಿ ಬಿಲ್ಡಿಂಗ್ ಮಾಡುವುದೇ ಕೆಟ್ಟದ್ದು. ಚಿಕ್ಕ ವಯಸ್ಸಿನಲ್ಲಿ ಬಾಡಿ ಬಿಲ್ಡಿಂಗ್ ಆರಂಭಿಸಿದರೆ ಕಳ್ಳಾಗುತ್ತವೆ. ಬಾಡಿ ಬಿಲ್ಡಿಂಗ್ ಮಾಡಬೇಕಾದರೆ ವಿಪರೀತ ತಿನ್ನಬೇಕು. ಮಾಂಸ ತಿನ್ನದವರು ಮಾಂಸ ತಿನ್ನಬೇಕು. ಕುರಿ ಕಾಲಿನ ಸೂಪ್ ಕುಡಿಯಬೇಕು. ಒಂದು ವೇಳೆ ಬಾಡಿ ಬಿಲ್ಡಿಂಗ್ ನಿಲ್ಲಿಸಿದರೆ ಹೊಟ್ಟೆ ಬೆಳೆಯುತ್ತದೆ. ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆ.. ಒಂದ.. ಎರಡ … ಹೀಗೆ ಅನೇಕ ಕಲ್ಪಿತ ಸುದ್ದಿಗಳು ಹರದಾಡುತ್ತವೆ.
ಬಾಡಿ ಬಿಲ್ಡಿಂಗ್ ಅನ್ನು ಕ್ರಿಕೆಟ್ನೊಂದಿಗೆ ಹೋಲಿಸಿ ನೋಡಿ ನಿಮ್ಮ ಮನೆಯ ಗೋಡೆಯನ್ನು ವಿಕೆಟ್ ಮಾಡಿಕೊಂಡು ಒಬ್ಬರು ಮೂವರು ಕ್ರಿಕೆಟ್ ಆಡಬಹುದು. ಇಲ್ಲವೇ ಮೈದಾನದಲ್ಲಿ ಟೆನಿಸ್ ಬಾಲ್ ನಲ್ಲಿ ನೂರು ಇನ್ನೂರು ಬೆಟ್ಟಿಂಗ್ ಮಾಡಿಕೊಂಡು ಪಂದ್ಯ ಆಡಬಹುದು . ಕಾರ್ಕ್ ಬಾಲ್ ಅಥವಾ ಲೆದರ್ ಬಾಲ್ ಪಂದ್ಯಗಳಲ್ಲಿ ನಮಗೆ ಎಷ್ಟರ ಮಟ್ಟಿಗೆ ಆದ್ಯತೆಯ ಅಷ್ಟರವರೆಗೆ ಮಾತ್ರ ನಾವು ಕ್ರಿಕೆಟ್ ಆಡುತ್ತೇವೆ. ಕ್ರಿಕೆಟ್ ಅನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳ ಬಯಸುವವರು ಮಾತ್ರ ಮುಂದುವರಿಯುತ್ತಾರೆ .
ಮೂಲಭೂತವಾಗಿ ಬಾಡಿ ಬಿಲ್ಡಿಂಗ್ನ ಲಾಭವೆಂದರೆ ನಿಮ್ಮ ಇಡೀ ದಿನ ಕಾರ್ಯಕ್ರಮ ಹೆಚ್ಚು ವ್ಯವಸ್ಥಿತ ವಾಗುವುದು ಕೇವಲ ಅರ್ಧ ಗಂಟೆಯ ವ್ಯಾಯಾಮ ಉಸಿರಾಟ -ರಕ್ತ ಸಂಚಾರವನ್ನು ಹೆಚ್ಚಿಸಿ ಕ್ರಮಬದ್ಧ ಗೊಳಿಸುವುದರಿಂದ ಸಮಯಕ್ಕೆ ಸರಿಯಾಗಿ ಹಸಿವಾಗುತ್ತದೆ ನಿದ್ದೆ ಬರುತ್ತದೆ ಎರಡನೆಯದಾಗಿ ಯಾವುದೇ ಕ್ರೀಡೆಗಳು ಸಾಧ್ಯವಾಗದ ಪ್ರೀತಿಯಲ್ಲಿ ನಿಮ್ಮ ದೇಹದ ಪ್ರತಿಯೊಂದು ಸ್ನಾಯುವಿಗೆ ಸಮಾನ ಅವಕಾಶ ನೀಡುವ ರೀತಿಯಲ್ಲಿ ಬಾಡಿ ಬಿಲ್ಡಿಂಗ್ ನಲ್ಲಿ ಮಾತ್ರ ವ್ಯಾಯಾಮ ಮಾಡಲು ಸಾಧ್ಯ .
ಮೂರನೆಯದಾಗಿ ಬಾಡಿ ಬಿಲ್ಡಿಂಗ್ ನಿಂದಾಗಿ ದೇಹಕ್ಕೆ ನೇರವಾಗಿ ಮಾತ್ರವಲ್ಲದೆ ಪರೋಕ್ಷವಾಗಿಯೂ ಲಾಭವಾಗುತ್ತದೆ ಉದಾಹರಣೆಗೆ ಸ್ನಾಯುಗಳು ಬಲಿಷ್ಠಗೊಳ್ಳುವುದು ನೇರವಾದ ಲಾಭವಾದರೆ ಬಲಿಷ್ಠ ಸ್ನಾಯುಗಳು ಹೆಚ್ಚಿನ ಆಹಾರವನ್ನು ಸುಡುವುದರಿಂದ ನಿಮ್ಮ ದೇಹದ ತೂಕ ಇಳಿಸುವುದು ಸುಲಭ ವಾಗುವುದು ಪರೋಕ್ಷ ಲಾಭ .
ಬಾಡಿ ಬಿಲ್ಡಿಂಗ್ ಮಾಡುವವರೆಲ್ಲರೂ ಅರ್ನಾಲ್ಡ್ ನಂತೆ. ಸಿಲ್ವಸ್ಟರ್ ಸ್ಟಾಲಿನ್ ನಂತೆ ಭಾರೀ ದೇಹವನ್ನು ಬೆಳೆಸಿಕೊಳ್ಳಬೇಕಾಗಿಲ್ಲ. ಆದರೆ ಸ್ನಾಯುಗಳು ಹೆಚ್ಚು ಗಡುಸು ಕೊಳ್ಳುವುದರಿಂದ ಮೂವತ್ತೈದರ ಹರೆಯದ ನಂತರದ ಸ್ನಾಯು ಕೊರತೆ ನಿಲ್ಲುವುದು ವೈಜ್ಞಾನಿಕವಾಗಿ ಸಿದ್ಧವಾಗಿರುವ ಸತ್ಯ.
ಅಮೆರಿಕದ ವಿಶ್ವ ವಿದ್ಯಾಲಯವೊಂದು ನಡೆಸಿದ ಒಂದು ಪ್ರಯೋಗಾಲಯದಲ್ಲಿ ಕೇವಲ ಎರಡು ತಿಂಗಳ ಬಾಡಿ ಬಿಲ್ಡಿಂಗ್ ವ್ಯಾಯಾಮಗಳನ್ನು ಪಾಲಿಸಿದ ತೊಂಬತ್ತರ ಹರೆಯದ ಮಂದಿಯೂ ರಕ್ತದೊತ್ತಡ. ಸಕ್ಕರೆ ಕಾಯಿಲೆಗಳು ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದ್ದವು .ಮೂಳೆ ಮುರಿದ ನಂತರದ ಫಿಸಿಯೋ ಥೆರಪಿ ಕೂಡ ಬಾಡಿ ಬಿಲ್ಡಿಂಗ್ನ ವ್ಯಾಯಾಮಗಳು ಇನ್ನಾದರೂ ನಾವು ಬಾಡಿ ಬಿಲ್ಡಿಂಗ್ ನ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು
ಯುವಿಷ್ಕಾ