ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ: ಮಾಜಿ ಸಚಿವ ಈಶ್ವರಪ್ಪ ಎಚ್ಚರಿಕೆ

ಬೆಂಗಳೂರು

ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ ಮಾತನಾಡಿದ ಅವರು, ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ.

ನೀವು ನಿಮ್ಮ ಹಬ್ಬ ಮಾಡಲ್ವಾ? ನಾವು ಬೆಂಬಲ ಕೊಡಲ್ವಾ? ನಮ್ಮ ಹಬ್ಬದ ತಂಟೆಗೆ ಬರಬೇಡಿ ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ನಿನ್ನೆ ಬೆಳಗ್ಗೆ ಸರ್ಕಾರಿ ಕಾರ್ಯಕ್ರಮ ಕೂಡ ಯಶಸ್ವಿಯಾಯ್ತು. ಬಿಜೆಪಿಯ ಅಮೃತಮಹೋತ್ಸವ ಕಾರ್ಯಕ್ರಮ ಕೂಡ ಯಶಸ್ವಿಯಾಗಿತ್ತು.

ಎಲ್ಲರೂ ಕೂಡ ಮನೆಗೆ ಹೋಗಿದ್ದೇವು. ಅಷ್ಟರೊಳಗೆ ಕೆಲ ಕಿಡಿಗೇಡಿಗಳು ಸಾರ್ವಕರ್ ಪೋಟೋ ತೆಗೆದುಹಾಕಿದ್ದಾರೆ. ಎಸ್​ಡಿಪಿಐ ಕಾರ್ಯಕರ್ತರು ಸಾವರ್ಕರ್​​​ ಫೋಟೋ ತೆಗೆದು ಹಾಕಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತವರಣ ಆರಂಭವಾಗಿದೆ. ಈ ಮಧ್ಯೆ ಗಾಂಧಿಬಜಾರ್​ನಲ್ಲಿ ಚಾಕು ಇರಿದಿದ್ದಾರೆ. ಪೊಲೀಸರು ಬಹಳ ಶ್ರಮ ಹಾಕಿ ಆರೋಪಿಗಳನ್ನು ಬಂಧಿಸಿದ್ದು, ಒಬ್ಬನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published.