ಗಣೇಶ ಚತುರ್ಥಿಗೆ BBMP‌ಯಿಂದ ಹಲವು ನಿಯಮ ಜಾರಿ: ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್

ಬೆಂಗಳೂರು

ಬೆಂಗಳೂರು: ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳು ಜಾರಿಯಾಗಿದೆ. ಅಲ್ಲದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಗಣೇಶ ಚತುರ್ಥಿಗೆ ಬಿಬಿಎಂಪಿ‌ ಹಲವು ನಿಯಮಗಳನ್ನು ಜಾರಿ ಮಾಡಿದ್ದು, ಈ ಬಾರಿಯೂ ಬೆಂಗಳೂರಿನಲ್ಲಿ ವಾರ್ಡ್​​ಗೊಂದೇ ಗಣೇಶ ಕೂಡಿಸಬೇಕೆಂದು ಬಿಬಿಎಂಪಿ ಹೇಳಿದೆ.

ಕಳೆದ ವರ್ಷದ ನಿಯಮಗಳೆ ಈ ಬಾರಿಯೂ ಜಾರಿಯಾಗಲಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಪಿಒಪಿ ಗಣೇಶ ಮೂರ್ತಿ ತಯಾರಿಸಬಾರದೆಂಬ ನಿಯಮವಿದೆ. ಹೀಗಾಗಿ ಯಾರೂ ಪಿಒಪಿ ಗಣೇಶ ಮೂರ್ತಿ ತಯಾರಿಸಿ, ಮಾರಾಟ ಮಾಡಬಾರದು. ಒಂದು ವೇಳೆ ಪಿಒಪಿ ಮೂರ್ತಿಗಳನ್ನ ಮಾರಿದರೇ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸೇರಿ ರೇಡ್ ಮಾಡಿ ಕ್ರಮ‌ ಕೈಗೊಳ್ಳಲಾಗುತ್ತದೆ ಎಂದು ಖಡಕ್​ ಸೂಚನೆ ನೀಡಿದ್ದಾರೆ.

Leave a Reply

Your email address will not be published.