ಕ್ರೈಂ ಸಿಬ್ಬಂದಿ ಎಂದು ಸ್ಪಾ ಗೆ ನುಗ್ಗಿ ಹಣ ವಸೂಲಿ ಮಾಡಿದ್ದ ಗ್ಯಾಂಗ್ ಅರೆಸ್ಟ್..!

ಅಪರಾಧ

ಬೆಂಗಳೂರು: ಕ್ರೈಂ​ ಸ್ಕ್ವಾಡ್​​​ನವರು ಎಂದು ಸ್ಪಾಗೆ ನುಗ್ಗಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ, ಹೆಣ್ಣೂರು, ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೋಮ್​ ಗಾರ್ಡ್​ಗಳು ಸೇರಿ ಐವರನ್ನು ಬಂಧಿಸಲಾಗಿದೆ. ಕಲೀಮ್, ಸಂಪಂಗಿ ರಾಮ್, ಆನಂದ್ ರಾಜ್, ವಿನಯ್ ಕುಮಾರ್, ಹಾಗೂ ಆಸೀಫ್ ಖಾನ್ ಬಂಧಿತ ಆರೋಪಿಗ ಳಾಗಿದ್ದಾರೆ. ಆರೋಪಿಗಳು ನಾವು ಪೊಲೀಸರು, ಕ್ರೈಂ​ ಸ್ಕ್ವಾಡ್ ಎಂದು ಸ್ಪಾಗೆ ನುಗ್ಗಿ,  ತಾವೇ ಕಾಂಡೋಮ್​ಗಳನ್ನು ಸ್ಪಾದಲ್ಲಿ ಎಸೆಯು ತ್ತಿದ್ದರು. ಬಳಿಕ ಕೇಸ್​ ಮಾಡುತ್ತವೆ ಎಂದು ಹೆದರಿಸಿ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು. ನಗರದ ಸ್ಪಾ ಒಂದರಲ್ಲಿ ಒಂದು ಲಕ್ಷ ಅರವತ್ತು ಸಾವಿರ ಹಣ ವಸೂಲಿ ಮಾಡಿರುವ ಆರೋಪಿಗಳು ಮತ್ತು ಹೆಚ್ಚಿನ ಹಣ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.

Leave a Reply

Your email address will not be published.