1867 ರಲ್ಲಿ ಕೆನಡಾ ಒಂದು ದೇಶ ಎಂದಾದಾಗ ಕ್ರಿಕೆಟ್ ಆ ದೇಶದ ರಾಷ್ಟ್ರೀಯ ಕ್ರೀಡೆಯೂ ಆಯಿತು. ಭಾರತದಲ್ಲಿ ಕ್ರಿಕೆಟ್ ಅನ್ನು ಪ್ರೀತಿಸುವ ಹಾಗೆ ಕೆನಡಾದಲ್ಲೂ ಕೂಡ, ಮನೆ ಮನೆಯಲ್ಲೂ ಕ್ರಿಕೆಟನ್ನ ಪ್ರೀತಿಸುವ ಜನರಿದ್ದಾರೆ, ಕೆನಡಾ ದೇಶದಿಂದ ಒಂದೆರಡು ಬಾರಿ ವಿಶ್ವಕಪ್ ಗೆ ತಂಡ ಪ್ರವೇಶ ಪಡೆದಿದ್ದರೂ ಕೂಡ ಅಂತಹ ಸ್ಟಾರ್ ಆಟಗಾರರು ಆ ದೇಶದಲ್ಲಿ ಉದಯಿಸಲಿಲ್ಲ. ಕ್ರಿಕೆಟ್ ನಲ್ಲಿ ತನ್ನದೇ ದೇಶದ ಬಲಿಷ್ಠ ತಂಡವನ್ನು ಕಟ್ಟದಿದ್ದರೂ ಕೂಡ, ಕೆನಡಾದ ರಾಜಧಾನಿ ಟೊರೆಂಟ್ ಗೆ ಕ್ರಿಕೆಟ್ ಕುರಿತು ಶತಮಾನಗಳ ಇತಿಹಾಸವೇ ಇದೇ. ದೇಶ ಹುಟ್ಟುವ ಮೊದಲೇ ಇಲ್ಲಿ ಕ್ರಿಕೆಟ್ ಇತ್ತು . 1827 ರಲ್ಲಿ ಟೊರೆಂಟ್ ಮೈದಾನವು ರೂಪುಗೊಂಡಿತ್ತು. ಬ್ರಾಡ್ಮನ್. ಗ್ರೀಸ್ ಕೂಡಾ ಕೆನಡಾಕ್ಕೆ ಕ್ರಿಕೆಟ್ ಪ್ರವಾಸ ಮಾಡಿದ್ದರು ಎಂಬುದು ಇತಿಹಾಸ .
ಇಂತಹ ಶತಮಾನಗಳ ಇತಿಹಾಸ ಹೊಂದಿರುವ ಟೊರೊಂಟೊ ಮೈದಾನ ಮುನ್ನೆಲೆಗೆ ಹಾಗೂ ವಿಶ್ವ ಖ್ಯಾತಿಗೆ ಬಂದಿದ್ದು ಭಾರತ ಹಾಗೂ ಪಾಕಿಸ್ತಾನಗಳ ಪಂದ್ಯಾವಳಿಯನ್ನು ಆಯೋಜಿಸಿ . ಭಾರತ ಮೂಲದ ಸಹಾರಾ ಕಂಪನಿ ಈ ಪಂದ್ಯಾವಳಿಗೆ ಪ್ರಾಯೋಜಕತ್ವವನ್ನು ನೀಡಿದ್ದರಿಂದ ಟೊರಾಂಟೊ ಮೈದಾನದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿಯನ್ನು ಸಹಾರಾ ಸರಣಿ ಅಂತಲೇ ಕರೆಯಲಾಗುತ್ತಿತ್ತು . ಸಹಾರಾ ಸರಣಿಯಿಂದ ಟೊರೊಂಟೊ ಹೀಗೆ ವಿಶ್ವ ಕ್ರಿಕೆಟ್ ನಲ್ಲಿ ಸ್ಥಾನ ಪಡೆದಿತ್ತು. ಟೊರೊಂಟೊ ಪಂದ್ಯಾವಳಿಯಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಸ್ಟಾರ್ ಆಟಗಾರರಾಗಿ ಪ್ರಪಂಚದ ಕ್ರಿಕೆಟ್ ಧ್ರುವತಾರೆಯಾಗಿ ಹೊರಹೊಮ್ಮಿದ್ದು ಕೂಡ ಇಲ್ಲಿಯೆ. ಗಂಗೂಲಿಯನ್ನು ಸಹಾರಾ ಗಂಗೂಲಿ ಎಂದು ಕರೆಯುತ್ತಿದ್ದುದು ಇತಿಹಾಸ.
ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ಬಿಸಿಸಿಐನ ಅಧ್ಯಕ್ಷ. 1996ರಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಿಂದ ಆರಂಭವಾಗಿರುವ ಗಂಗೂಲಿಯ ಕ್ರಿಕೆಟ್ ಯಾತ್ರೆ ಸರಿಸುಮಾರು ಹತ್ತು ವರ್ಷಗಳ ಕಾಲ ಭಾರತದ ಕ್ರಿಕೆಟ್ ಪುಟಗಳಲ್ಲಿ ಚೈತ್ರ ಯಾತ್ರೆಯನ್ನೇ ಮಾಡಿದರು .
ಪಾಯಿಂಟ್ ಹಾಗೂ ಮಿಡ್ ಗಳಲ್ಲಿ ಮಾತ್ರ ಶಾರ್ಟ್ ಗಳನ್ನು ಪರಿಪೂರ್ಣತೆಯಿಂದ ಹೊಡೆಯುತ್ತಿದ್ದ ಗಂಗೂಲಿ ಟೊರೊಂಟೊ ಮೈದಾನದಲ್ಲಿ ಹೊಡೆಯುತ್ತಿದ್ದ ಲೇಗ್ ಸೈಡ್ ಶಾಟ್ ಗಳು ಟೊರೊಂಟೊದ ಮೈದಾನದಲ್ಲಿ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಅದು ಕೂಡ ಭಾರತ ಪಾಕಿಸ್ತಾನದ ನಡುವಿನ ಹೈವೋಲ್ಟೆಜ್ ಪಂದ್ಯದಲ್ಲಿ.
ಟೊರಾಂಟೊ ಪಿಚ್ ಗಂಗೂಲಿಗೆ ಮಾಡಿಸಿದ್ದೇನೆ ಎಂಬಂತೆ ರೂಪುಗೊಂಡಿತ್ತು. ಗಂಗೂಲಿ ಸಹಾರಾದ ಮನೆಯವನೇ ಎನಿಸಿ ಬಿಟ್ಟಿದ್ದರು. ಆಘಾತ ಎನಿಸುವ ಪಿಚ್ ಗಳಲ್ಲಿ ವಿಶ್ವನಾಥ್ ಆಡುತ್ತಿದ್ದಂತೆ ಇಂಗ್ಲೆಂಡ್ನ ದಿನವಿಡೀ ಸ್ವಿಂಗ್ , ಸ್ಪಿನ್. ಪಡೆಯುವ ಪರಿಣಾಮಕಾರಿ ಪಿಚ್ ಗಳಲ್ಲಿ ಭಾರತದ ಪುರಾತನ ಆಟಗಾರ ವಿಜಯ್ ಮರ್ಚೆಂಟ್ ಆಡುತ್ತಿದ್ದಂತೆ ಕಲ್ಕತ್ತ ಪಿಚ್ ನಲ್ಲಿ ಅಸರ್ ಹೆಚ್ಚು ಆತ್ಮವಿಶ್ವಾಸದಿಂದ ಆಡುವಂತೆ ಕೆನಡಾದ ಟೊರೊಂಟೊದಲ್ಲಿ ಸೌರವ್ ಗಂಗೂಲಿ ಆಡಿದ ಆಟ ಅದ್ಭುತ ಹಾಗೂ ಇತಿಹಾಸ ಕೂಡ .
ಕೆನಡಾದ ಟೊರಾಂಟೊ ಪಿಚ್ ನಲ್ಲಿ ಕೇವಲ ಬ್ಯಾಟ್ ನಿಂದ ಮ್ಯಾಜಿಕ್ ಮಾಡದೆ, ಬೌಲಿಂಗ್ ನಿಂದಲೂ ಕೂಡ ಚಮತ್ಕಾರ ಮಾಡುತ್ತಿದ್ದರು, ಗಂಗೂಲಿ, ಶ್ರೀನಾಥ್, ಪ್ರಸಾದ್ ರಂಥ ಆಗಿನ ಪಳಗಿದ ವೇಗಿಗಳೇ ವಿಕೆಟ್ ಎತ್ತಲು ಟೊರೊಂಟೊದ ಪಿಚ್ ನಲ್ಲಿ ಸಾಹಸ ಪಟ್ಟರೆ. ಗಂಗೂಲಿ ಸಲೀಸಾಗಿ ತನ್ನ slover ಬಾಲ್ಗಳಿಂದ ಪಾಕಿಸ್ತಾನದ ಬ್ಯಾಟ್ ಮ್ಯಾನ್ ಗಳು ಒದ್ದಾಡುವಂತೆ ಮಾಡುವುದು ನೋಡುಗರಿಗೆ ಕುತೂಹಲ ಹುಟ್ಟಿಸಿತ್ತು.. ಅದು ಸೀಸನ್ ನಲ್ಲಿ ನಡೆದಂಥ ಸಹಾರಾ ಕಪ್ . ಕೆನಡಾದ ಭಾರತ- ಪಾಕ್ ಪಂದ್ಯಾವಳಿ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಂಗೂಲಿಗೆ ಮೀಸಲಾಗಿಟ್ಟಂತೆ,
.
ಸೀಸನ್ ನ ಐದು ಪಂದ್ಯಗಳು ಈ ಎರಡೂ ದೇಶಗಳ ನಡುವೆ ನಡೆದರೆ, ಐದು ಪಂದ್ಯಗಳಲ್ಲೂ ಗಂಗೂಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆಯುತ್ತಿದ್ದರು
ಇಷ್ಟೆಲ್ಲಾ ಆದರೂ ಸಹಾರಾ ಹಾಗೂ ಗಂಗೂಲಿಯಿಂದ ಮಾತ್ರ ಕ್ರಿಕೆಟ್ ಜಗತ್ತಿನಲ್ಲಿ ಕೆನಡಾದ ಟೊರೊಂಟೊದ ಮಾತುಗಳು ಜನಪ್ರಿಯವಾಗಿವೆ . ಹಾಗೆಯೇ ಗಂಗೂಲಿ ಏನೆಲ್ಲಾ ಸಾಧನೆ ಮಾಡಿದರೂ, ಸಹಾರಾ ಪಂದ್ಯಗಳು ಪ್ರಶಸ್ತಿಗಳು ಹಾಗೂ ಕಪ್ ಅವರ ಮನೆಯ ಶೋಕೇಸ್ ನಲ್ಲಿ ವಿಶೇಷ ಹೊಳಪಿನಿಂದ ಮಿಂಚುತ್ತಿವೆ.
ಯುವಿಷ್ಕಾ