ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಅಂತರಾಷ್ಟ್ರೀಯ

ಕೋವಿಡ್ ಸ್ಫೋಟ ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದಾದ ಬಳಿಕ ಚೇತರಿಸಿಕೊಂಡ ವಿಶ್ವನಿಧಾನವಾಗಿ ಚೇತರಿಕೆಯತ್ತ ಸಾಗಿತ್ತು. ಇದೀಗ ವಿಶ್ವದ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಏರಿಕೆಯಾಗುತ್ತಿದೆ. ಈ ಕುರಿತು ಈಗಾಗಲೇ ಹಲವು ಸಭೆ ನಡೆಸಿದ್ದ ವಿಶ್ವ ಆರೋಗ್ಯ ಸಂಸ್ಥೆ ಇಂದು ತಜ್ಞ ವೈದ್ಯರ ಜೊತೆ ಸಭೆ ನಡೆಸಿ ಮಹತ್ವದ ಘೋಷಣೆ ಮಾಡಿದೆ. ಮಂಕಿಪಾಕ್ಸ್ ಪ್ರಕರಣ ಏರಿಕೆಯಿಂದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದೆ.

ಮಂಕಿಪಾಕ್ಸ್ ಪ್ರಕರಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವು ರಾಷ್ಟ್ರಗಳಲ್ಲಿ ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿದೆ. ಇದು ಮಾರಕವಾಗಬಲ್ಲ ಸಾಧ್ಯತೆ ದಟ್ಟವಾಗುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿ ಘೋಷಿಸುತ್ತಿದೆ ಎಂದು WHO ಡೈರೆಕ್ಟರ್ ಜನರಲ್ ಟೆಡ್ರೋಸ್ ಅದಮೊನ್ ಗೆಬ್ರಿಯಸೆಸ್ ಹೇಳಿದ್ದಾರೆ. ಮಂಕಿಪಾಕ್ಸ್ ಪ್ರಕರಣ ಇದೀಗ 70 ದೇಶದಲ್ಲಿ ಕಾಣಿಸಿಕೊಂಡಿದೆ. ನಿಯಂತ್ರಣ ಮೀರಿ ಮಂಕಿಪಾಕ್ಸ್ ಪ್ರಕರಣ ದೇಶಗಳನ್ನು ವ್ಯಾಪಿಸುತ್ತಿದೆ.

Leave a Reply

Your email address will not be published.