ಗೋಡೆ ಮೇಲೆ ಲಿಫ್ಟ್ ಸ್ಟಿಕ್ ನಲ್ಲಿ ಡೆತನೋಟ್..! ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ರಾಷ್ಟ್ರೀಯ

ರಾಂಚಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಚಂದಾ ದೇವಿ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣವೆನೆಂಬುವುದನ್ನು ಲಿಪ್‍ಸ್ಟಿಕ್‍ನಿಂದ ಮನೆಯ ವಾಲ್ ಮೇಲೆ ಬರೆದಿದ್ದಾರೆ. 2019ರಲ್ಲಿ ಚಂದಾ ದೇವಿ ಅವರು, ದಿಲೀಪ್ ಚೌಹಾಣ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ದೂರವಾಗಿದ್ದರು. ನಿತ್ಯವೂ ಇಬ್ಬರು ಜಗಳವಾಡುತ್ತಿದ್ದರು. ತನ್ನ ಸಾವಿಗೆ ಅತ್ತೆಯಂದಿರು ಮತ್ತು ಪತಿ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆತ್ಮಹತ್ಯೆ ಬರಹದಲ್ಲಿ ಗೃಹಿಣಿ ಬಹಿರಂಗಪಡಿಸಿದ್ದಾರೆ.

ರಾತ್ರಿ ದಿಲೀಪ್ ಮನೆಯಲ್ಲಿ ಇಲ್ಲದ ವೇಳೆ ಚಂದಾ ರಾತ್ರಿ ರೂಮ್ ಬೀಗ ಹಾಕಿಕೊಂಡು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ವೇಳೆ ಚಂದಾ ದೇವಿಯ ಇಬ್ಬರು ಹೆಣ್ಣುಮಕ್ಕಳು ಅಳುತ್ತಿರುವುದನ್ನು ಗಮನಿಸಿದ ಅತ್ತೆ ಕಿಟಕಿಯ ಕೋಣೆಯನ್ನು ಇಣುಕಿ ನೋಡಿದಾಗ ಸೀಲಿಂಗ್‍ನಲ್ಲಿ ಚಂದಾ ದೇವಿ ಶವ ನೇತಾಡುತ್ತಿರುವ ನೋಡಿದ್ದಾರೆ. ವರದಕ್ಷಿಣೆಗಾಗಿ ಚಂದಾಗೆ ಕಿರುಕುಳ ನೀಡುತ್ತಿದ್ದರು ಎಂದು ದಿಲೀಪ್ ಕುಟುಂಬ ಸದಸ್ಯರ ವಿರುದ್ಧ ಆಕೆಯ ಸಂಬಂಧಿಕರು ಪ್ರಕರಣ ದಾಖಲಿಸಿದ್ದಾರೆ. ಸಾಯುವ ಮುನ್ನ ಚಂದಾ ತನ್ನ ದುಪಟ್ಟಾ ಸಹಾಯದಿಂದ ತನ್ನ ಪುಟ್ಟ ಮಕ್ಕಳನ್ನು ಕಿಟಕಿಗೆ ಕಟ್ಟಿ ಹಾಕಿದ್ದಳು. ಮಕ್ಕಳು ಅಳುವ ಶಬ್ಧವನ್ನು ಕೇಳಿ ನಂತರ ನೆರೆಹೊರೆಯವರು ಕೋಣೆಗೆ ನುಗ್ಗಿ ಬಾಲಕಿಯರನ್ನು ರಕ್ಷಿಸಿದ್ದಾರೆ.

 

Leave a Reply

Your email address will not be published.