ತೀವ್ರ ಡಿಪ್ರೆಶನ್ ಗೆ ಹೋಗಿರುವ ಅಮೃತ್ ಪೌಲ್: ನಿಮ್ಹಾನ್ಸ್ ನಲ್ಲಿ ಮಾಜಿ ADGPಗೆ ಚಿಕಿತ್ಸೆ

ಬೆಂಗಳೂರು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್‍ ತೀವ್ರ ಡಿಪ್ರೆಶನ್‌ ಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರನ್ನು ಜೈಲಾಧಿಕಾರಿಗಳು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟು ದಿನ ಆರಾಮ್‌ ಆಗಿದ್ದ ಹಿರಿಯ ಅಧಿಕಾರಿ ಅಮೃತ್ ಪೌಲ್‍ ಹಗರಣದಿಂದ ಜೈಲು ಸೇರಿದ್ದೆ ಅವರಿಗೆ ಮಾನಸಿಕವಾಗಿ ಹಿಂಸೆ ಶುರುವಾಗಿದೆ.

ಅದೆಷ್ಟೋ ಆರೋಪಿಗಳ ಜೈಲಿಗೆ ಕಳುಹಿಸಿದ್ದ ಅಮೃತ್ ಪೌಲ್ ಅದೇ ಆರೋಪಿಗಳ ಜೊತೆ ಕಾಲ ಕಳೆಯುವಂತೆ ಆಗಿದೆ. ಆರೋಪಿಗಳ ಜೊತೆ ಬೆರೆಯುವುದಕ್ಕೂ ಆಗದೆ ಒಂಟಿತನ ಅವರಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಡಿಪ್ರೆಶನ್‍ಗೆ ಹೋಗಿದ್ದಾರೆ. ಇನ್ನೂ ಅಮೃತ್ ಪೌಲ್ ಬಂಧನವಾಗುವ ಮುಂಚೆಯಿಂದಲೂ ಡಿಪ್ರೆಶನ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಾಡಿದ ಕೆಲಸದಿಂದ ಜೈಲು ಸೇರಿ ಅವರಿಗಿದ್ದ ಸಮಸ್ಯೆ ಉಲ್ಬಣವಾಗಿದೆ.

Leave a Reply

Your email address will not be published.