ಒಬ್ಬರ ಮನೆಗೆ ಹೋಗಿ ಇನ್ನೊಬ್ಬರ ಮನೆಗೆ ಹೋಗದೆ ತಾರತಮ್ಯ ಮಾಡಿಲ್ಲ: ಯು.ಟಿ ಖಾದರ್

ಜಿಲ್ಲೆ

ಮಂಗಳೂರು: ಹತ್ಯೆಯಾದ ಎಲ್ಲರ ಮನೆಗೂ ಸಿ.ಎಂ ಬರುತ್ತೇನೆ ಎಂದು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ. ಪರಿಹಾರ ಕೊಡುವ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸುತ್ತಾರೆ. ಕನಿಷ್ಠ ಮಾನವೀಯತೆ ದೃಷ್ಟಿಯಿಂದಾದರೂ ಮನೆಗೆ ಹೋಗಬೇಕು. ತಾರತಮ್ಯ ಮಾಡುವುದನ್ನು ಯಾವ ಧರ್ಮದವರು ಸಹ ಒಪ್ಪಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಹತ್ಯೆಯಾದವರಿಗೆ ಸರ್ಕಾರದಿಂದ ಪರಿಹಾರ ನೀಡುವಲ್ಲಿ ತಾರತಮ್ಯ ವಿಚಾರವಾಗಿ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಸಮಾನ ಪರಿಹಾರ ಕೊಟ್ಟಿದ್ದೇವೆ. ಅಶ್ರಫ್ ಕಲಾಯಿ- ಶರತ್ ಮಡಿವಾಳ ಇಬ್ಬರಿಗೂ ಪರಿಹಾರ ನೀಡಿದ್ದೇವೆ. ದೀಪಕ್ ರಾವ್ – ಬಷೀರ್ ಇಬ್ಬರಿಗೂ ಸಮಾನ ಪರಿಹಾರ ಕೊಡಲಾಗಿದೆ. ವೈಯಕ್ತಿಕ ದ್ವೇಷದ ಹಲ್ಲೆ ಆದಾಗ ಪರಿಹಾರ ಕೊಡದೆ ಇರಬಹುದು. ಒಬ್ಬರ ಮನೆಗೆ ಹೋಗಿ ಇನ್ನೊಬ್ಬರ ಮನೆಗೆ ಹೋಗದೆ ತಾರತಮ್ಯ ಮಾಡಿಲ್ಲ ಎಂದು ಸಿಎಂ ನಡೆಯ ಕುರಿತು ಕೆಂಡಕಾರಿದ್ದಾರೆ.

Leave a Reply

Your email address will not be published.