ಬೆಂಗಳೂರು: ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ನಂದೀನಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಯಿಂದ ಬರೋಬ್ಬರಿ 1 ಕೆ ಜಿ ಚಿನ್ನಾಭರಣವನ್ನು ವಶಪಡಿಸಿಕೊಡಿದ್ದಾರೆ. .ಬಂಧಿತ ಆರೋಪಿ ಉತ್ತಮ ದೋಲಾಯಿ ಪಶ್ಚಿಮ ಬಂಗಾಳ ಮೂಲದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸವಗಿದ್ದಾನೆ. ಆರೋಪಿ ಉತ್ತಮ ದೋಲಾಯಿ ಗಟ್ಟಿ ಬಂಗಾರವನ್ನ ತೆಗೆದುಕೊಂಡು ಆಭರಣ ಮಾಡಿ ಕೊಡುವ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಬಂಧಿತ ಆರೋಪಿ ಉತ್ತಮ ದೋಲಾಯಿ ಗಟ್ಟಿ ಬಂಗಾರವನ್ನು ಆಭರಣ ಮಾಡುವ ಕೆಲಸವನ್ನು ಮನೆಯಲ್ಲಿಯೆ ಮಾಡಿಕೊಂಡಿದ್ದ. ಹಲವು ಆಭರಣ ಮಳಿಗೆಯಿಂದ ಆರ್ಡರ್ ತೆಗೆದುಕೊಂಡು ಮಾಲೀಕರಿಗೆ ಗಟ್ಟಿ ಚಿನ್ನದಲ್ಲಿ ಆಭರಣ ಮಾಡಿಕೊಡುತ್ತಿದ್ದ. ನಗರದ ಕಬ್ಬನ್ ಪೇಟೆಯಲ್ಲಿರುವ ಎಸ್ ಕೆ ಜ್ಯೆವಲರ್ಸ್ ಮಳಿಗೆಯಿಂದ ಕೂಡ ಆಭರಣದ ಆರ್ಡರ್ ತೆಗೆದುಕೊಳ್ಳುತ್ತಿದ್ದ ಆರೋಪಿ ಉತ್ತಮ್ ದೋಲಾಯಿ, ಮಳಿಗೆಗೆ ಬೇಟಿ ನೀಡಿದ ಸಮಯದಲ್ಲಿ ಮಾಲೀಕರ ಗಮನಕ್ಕೆ ಬಾರದಂತೆ ಆಭರಣವನ್ನು ಕಳ್ಳತನ ಮಾಡಿದ್ದ. ಈ ವೇಳೆ ಆಭರಣದಲ್ಲಿ ವ್ಯತ್ಯಾಸ ಕಂಡು ಬಂದು ಸಿಸಿಟಿವಿ ಪರೀಶಿಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಸಿಸಿಟಿವಿಯಲ್ಲಿ ಉತ್ತಮ್ ದೋಲಾಯಿ ಆಭರಣಗಳನ್ನ ಜೇಬಿಗೆ ಹಾಕಿಕೊಳ್ಳುವುದು ಸ್ಪಷ್ಟವಾಗುತ್ತಿದ್ದಂತೆ ಎಸ್ ಕೆ ಜೆವೆಲರ್ಸ್ ಮಾಲೀಕ ದೂರು ನೀಡಿದ್ದರು.. ಇತ್ತ ನಂದೀನಿ ಲೇಔಟ್ ಪೊಲೀಸ್ರು ಆರೋಪಿಯ ಮನೆ ಶೋಧಿಸಿದ ವೇಳೆ 1 ಕೆಜೆ 16 ಗ್ರಾಂ ಚಿನ್ನಾಭರಣವನ್ನು ವಶಪಡಿಸಕೊಂಡಿದ್ದಾರೆ. ಈ ಆಭರಣದ ಮೌಲ್ಯ 45 ಲಕ್ಷ ಎಂದು ಅಂದಾಜಿಸಲಾಗಿದೆ.ಇನ್ನು ಪ್ರಕರಣ ಬೇದಿಸಿರುವ ನಂದೀನಿ ಲೇಔಟ್ ಪೊಲೀಸರ ಕಾರ್ಯಚರಣೆಗೆ ಡಿಸಿಪಿ ಶಶಿಕುಮಾರ್ ಅಭಿನಂದಿಸಿದ್ದಾರೆ.