Snapchat ಬಳಕೆದಾರರಿಗೆ ಗುಡ್ ನ್ಯೂಸ್: ಹೊಸ ಫೀಚರ್ ಘೋಷಿಸಿದ ಸ್ನ್ಯಾಪ್ ಚಾಟ್

ತಂತ್ರಜ್ಞಾನ

ಅಮೆರಿಕ: ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ಸ್ ಸ್ನ್ಯಾಪ್‌ಚಾಟ್ ಹೊಸ ಫೀಚರ್ ಅನ್ನು ಪರಿಚಯಿಸಲಿದೆ. ಈ ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಲೈವ್ ಲೊಕೇಶನ್ ಹಂಚಿಕೊಳ್ಳಬಹುದಾಗಿದೆ.ದಿ ವರ್ಜ್ ಪ್ರಕಾರ, ಈ ಫೀಚರ್ ಐಫೋನ್ ಆಪರೇಟಿಂಗ್​ ಸಿಸ್ಟಂನಲ್ಲಿರುವ ‘ಫೈಂಡ್ ಮೈ’ ಅಪ್ಲಿಕೇಶನ್‌ ಅನ್ನು ಹೋಲುತ್ತದೆ. ಈ ಆ್ಯಪ್ ಬಳಸುವ ಬಳಕೆದಾರರು ಸ್ನೇಹಿತರ ಅಥವಾ ಕುಟುಂಬಸ್ಥರು ಇರುವ ನಿಖರವಾದ ಸ್ಥಳವನ್ನು ನೋಡಬಹುದು.

ಸ್ನ್ಯಾಪ್‌ಚಾಟ್ ಸೆಟ್ಟಿಂಗ್​​ ಮೂಲಕ 15 ನಿಮಿಷಗಳಿಂದ ಹಲವು ಗಂಟೆಗಳವರೆಗೆ ಈ ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಲೈವ್ ಲೊಕೇಶನ್​​ನಲ್ಲಿ ಸಂಪರ್ಕದಲ್ಲಿರಬಹುದು. ಈ ಅಪ್ಲಿಕೇಷನ್ ಅನ್ನು ತಮ್ಮ ಸ್ನ್ಯಾಪ್​ಚಾಟ್​ ಕಾಂಟ್ಯಾಕ್ಟ್​ ಲಿಸ್ಟ್​ನಲ್ಲಿರುವವರೊಂದಿಗೆ ಮಾತ್ರ ಬಳಸಬಹುದಾಗಿದೆ.ಎಲ್ಲ ಸ್ನ್ಯಾಪ್​ ಚಾಟ್ ಸ್ನೇಹಿತರೊಂದಿಗೆ ಈ ಫೀಚರ್​ ಅನ್ನು ಹಂಚಿಕೊಳ್ಳಲು ಆಯ್ಕೆಗಳಿಲ್ಲ. ಬಳಕೆದಾರರು ಯಾವುದೇ ಸೂಚನೆಯನ್ನು ನೀಡದೇ ಲೈವ್ ಲೊಕೇಷನ್ ಅನ್ನು ಸ್ಥಗಿತಗೊಳಿಸಬಹುದಾಗಿದೆ.

ಲೈವ್ ಲೊಕೇಶನ್ ಸ್ನೇಹಿತನ ಚಾಟ್​ ವಿಂಡೋದಲ್ಲಿ ಗೋಚರಿಸುವಂತೆ ರೂಪಿಸಲಾಗಿದೆ. ಲೈವ್ ಲೊಕೇಶನ್ ಅನ್ನು ಹಂಚಿಕೊಳ್ಳಲು ಬಳಕೆದಾರರು ಸ್ನೇಹಿತರ ಪ್ರೊಫೈಲ್​ಗೆ ಹೋಗಿ ಅಲ್ಲಿನ ಸ್ಥಳವನ್ನು ಹಂಚಿಕೊಳ್ಳುವ ಆಯ್ಕೆಯನ್ನು ಒತ್ತಬೇಕಾಗುತ್ತದೆ.ಸುಮಾರು 250 ಮಿಲಿಯನ್ ಸ್ನ್ಯಾಪ್‌ಚಾಟ್ ಬಳಕೆದಾರರಿದ್ದು, ಈಗಾಗಲೇ ಸ್ನ್ಯಾಪ್ ಚಾಟ್ ಸ್ನೇಹಿತರು ಕೊನೆಯ ಬಾರಿ ಬಳಸಿದಾಗ ಎಲ್ಲಿದ್ದರು ಎಂದು ತಿಳಿದುಕೊಳ್ಳಲು ಸ್ನ್ಯಾಪ್ ಮ್ಯಾಪ್ ಅನ್ನು ಸ್ನ್ಯಾಪ್​ಚಾಟ್ ರೂಪಿಸಿದೆ.

Leave a Reply

Your email address will not be published.