ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ‘ಕೆಜಿಎಫ್ 2’ ಟ್ರೇಲರ್ ರಿಲೀಸ್ ಡೇಟ್ ಫೀಕ್ಸ್

ಚಲನಚಿತ್ರ

ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಕೊನೆಗೂ ಬಿಡುಗಡೆ ಆಗುತ್ತಿದೆ. ಕಳೆದ ಒಂದು ವರ್ಷದಿಂದ ಯಶ್ ಅಭಿಮಾನಿಗಳು ಸಿನಿಮಾದ ಬಗ್ಗೆ ಅಪ್ ಡೇಟ್ ಕೇಳುತ್ತಲೇ ಬಂದಿದ್ದರು. ಫ್ಯಾನ್ ಮೇಡ್ ಪೋಸ್ಟರ್ ಹಾಕಿ, ಪ್ರಶ್ನೆಗಳ ಸುರಿಮಳೆಗೈದಿದ್ದರು. ಕೊನೆಗೂ ಹೊಂಬಾಳೆ ಫಿಲ್ಮಸ್‍ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದೇ ಮಾರ್ಚ್ 27 ರಂದು ಸಂಜೆ 6.40ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಕೊರೋನಾ ಕಾರಣದಿಂದಾಗಿ ಅನೇಕ ಚಿತ್ರಗಳ ಕೆಲಸಗಳು ಆಮೆಗತಿಯಲ್ಲಿ ಸಾಗಿದವು.

 

ಕೆಜಿಎಫ್ 2 ದ ಕೆಲಸಗಳು ಕೂಡ ಹಿಂದೆ ಬಿದ್ದವು. ಹಾಗಾಗಿ ಸಿನಿಮಾದ ಯಾವ ಅಪ್ ಡೇಟ್ ಅನ್ನೂ ಚಿತ್ರತಂಡ ನೀಡಿರಲಿಲ್ಲ. ಟ್ರೈಲರ್ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಷನ್ ಗೆ ಸಿನಿಮಾ ತಂಡ ಸಜ್ಜಾಗಿದೆ. ಕೆಜಿಎಫ್ 1 ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಹಾಗಾಗಿ ಭಾಗ 2 ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಭಾಗ 2ರಲ್ಲಿ ಏನೆಲ್ಲ ವಿಷಯಗಳು ಇರಲಿವೆ ಎನ್ನುವುದನ್ನು ಟ್ರೈಲರ್ ಮೂಲಕ ಸಂಕ್ಷಿಪ್ತವಾಗಿ ತೋರಿಸುವ ಪ್ರಯತ್ನ ಮಾಡುತ್ತಾರಂತೆ ನಿರ್ದೇಶಕ ಪ್ರಶಾಂತ್ ನೀಲ್.

Leave a Reply

Your email address will not be published.