Home District 31ವರ್ಷ ಕಾರ್ಣಿಕ ನುಡಿದ ಗೊರವಯ್ಯನ ಭವಿಷ್ಯ ಅತಂತ್ರ: ಬೇಕಾಗಿದೆ ಸಹಾಯ ಹಸ್ತ

31ವರ್ಷ ಕಾರ್ಣಿಕ ನುಡಿದ ಗೊರವಯ್ಯನ ಭವಿಷ್ಯ ಅತಂತ್ರ: ಬೇಕಾಗಿದೆ ಸಹಾಯ ಹಸ್ತ

1155
0
SHARE

ಇವರು ನುಡಿಯುವ ಭವಿಷ್ಯವಾಣಿಯನ್ನ ನಂಬಿ ಇಡೀ ನಾಡಿನ ಜನರು ಬದುಕು ಕಟ್ಟಿಕೊಳ್ಳುತ್ತಿದ್ದರು, ಆದರೆ ಇಂತಾ ಭವಿಷ್ಯ ನುಡಿದ ಗೊರವಯ್ಯ ಇದೀಗ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹೌದು ರಾಜ್ಯದ ಹೆಸರಾಂತ ಕ್ಷೇತ್ರಗಳಲ್ಲೊಂದಾದ ಮೈಲಾರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಅದರಲ್ಲೂ ಇಲ್ಲಿ ನಡೆಯುವ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ವೀಕ್ಷಣೆಮಾಡಲು ಲಕ್ಷಾಂತರ ಭಕ್ತ ಸಮೂಹವೇ ಒಂದೆಡೆ ಸೇರಿರುತ್ತೆ, ಯಾಕೆಂದ್ರೆ ಇಲ್ಲಿ ಆಗುವ ಭವಿಷ್ಯವಾಣಿಯನ್ನ ನಾಡಿನ ಬಹುತೇಕ ಭಕ್ತರು‌ ನಂಬುತ್ತಾರೆ, ಮುಂದಿನ ಒಂದು ವರ್ಷದ ಅವದಿಯ ವರೆಗೆ ತಮ್ಮ ಬದುಕಿನ ದಿಕ್ಸೂಚಿ ಎಂದೇ ನಂಬುತ್ತಾರೆ ಇಲ್ಲಿಗೆ ಬರುವ ಲಕ್ಷಾಂತರ ಭಕ್ತರು. ಹೌದು ಇಂತಾ ಪ್ರಾಮುಖ್ಯತೆಯನ್ನ ಪಡೆದ ಕಾರ್ಣಿಕೋತ್ಸವ ನುಡಿಯುತಿದ್ದ ಗೊರವಯ್ಯನ ಪರಿಸ್ಥಿತಿ ಇಂದು ಸೋಚನೀಯವಾಗಿದೆ. ಮಾಲತೇಶಪ್ಪ ಎಂಬ ಈ ವೃದ್ದ ವ್ಯಕ್ತಿ ಕಳೆದ 31ವರ್ಷಗಳಿಂದ ನಿರಂತರವಾಗಿ ಕಾರ್ಣಿಕ ನುಡಿಯುತ್ತಾ ಬಂದಿದ್ದ, ಆದ್ರೆ ಇತ್ತೀಚೆಗೆ, ಅಂದರೆ ಕಳೆದ ಎಂಟತ್ತು ವರ್ಷಗಳಿಂದ ಇವರ ಆರೋಗ್ಯ ಹದಗೆಟ್ಟ ಹಿನ್ನೆಲೆ ಇದೀಗ ಆ ಕಾರ್ಣಿಕೋತ್ಸವದ ಭವಿಷ್ಯವಾಣಿಯನ್ನ ಅವರದೇ ವಂಶಸ್ಥರು ಕಾರ್ಣಿಕ ನುಡಿಯುತ್ತಿದ್ದಾರೆ.

ಇತ್ತಾ ಮಾಲತೇಶಪ್ಪನಿಗೆ ಪಾರ್ಶ್ವವಾಯು ಆವರಿಸಿಕೊಂಡಾಗಿನಿಂದ ಮೇಲೇಳುವುದು ಕಷ್ಟವಾಗಿ ಪರಿಣಮಿಸಿದೆ. ಹೀಗಾಗಿ ಅವರ ಕುಟುಂಭದವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ, ಇನ್ನು ಇತ್ತೀಚೆಗೆ ಕೊರೊನ ಹಾವಳಿ ಹೆಚ್ಚಾದಾಗಿನಿಂದ ಆತನ ಕಷ್ಟ ಹೇಳ ತೀರದು, ಮಾಲತೇಶಪ್ಪನಿಗೆ ಬೇಕಾದ ಔಷದಿ ಆಹಾರ ತಂದುಕೊಡುವುದು ಕಷ್ಟವಾಗಿದೆ ಇವರ ಮಡದಿಗೆ.ಅಲ್ಲದೆ ದುಡಿದು ಮನೆ ನಡೆಸುತ್ತಿದ್ದ ಇಬ್ಬರು ಮಕ್ಕಳು‌ ಕೂಡ ಕಳೆದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ, ಮಾಲತೇಶಪ್ಪ ಮತ್ತು ಆತನ ಹೆಂಡತಿ ಇಬ್ಬರೇ ಮನೆಯಲ್ಲಿದ್ದು ಇತ್ತ ಮಾಲತೇಶಪ್ಪನ ಹೆಂಡತಿ‌ ಗಂಡನನ್ನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿ ಬರುವ ಹಾಗಿಲ್ಲ, ಕೆಲಸಕ್ಕೆ ಹೋದರೆ ಮನೆಯಲ್ಲಿ ಗಂಡನ ಆರೈಕೆ ಮಾಡುವವರು ಇಲ್ಲದಂತಾಗುತ್ತದೆ, ಇಂತಾ ಪರಿಸ್ಥಿತಿಯ ಈ‌ ಕುಟುಂಭಕ್ಕೆ ಸರ್ಕಾರದಿಂದಾಗಲಿ ಅಥವಾ ದೇವಸ್ಥಾನದ ಆಡಳಿತ ಮಂಡಳಿಯಿಂದಾಗಲಿ ಯಾವುದೇ ಪ್ರಯೋಜನ ಸಿಕ್ಕಿಲ್ಲ, ವಾಸಮಾಡುವುದಕ್ಕೆ ಸರಿಯಾದ ಮನೆ ಕೂಡ ಇಲ್ಲದಂತಾಗಿದೆ. ಈ ಕುಟುಂಭಕ್ಕೆ,  ದಾನಿಗಳು ಸಂಘ ಸಂಸ್ಥೆಗಳಿಂದ ನೆರವಿನ ಸಹಾಯ  ಬೇಕಾಗಿದೆ.

ಮೈಲಾರಲಿಂಗೇಶ್ವರ ನಾಡಿನ ಭವಿಷ್ಯವನ್ನ ಈ ಮಾಲತೇಶಪ್ಪನ ಬಾಯಿಂದ ನುಡಿಸಿದ ಹೊರತು ಈತನ‌ ಭವಿಷ್ಯವನ್ನ ರೂಪಿಸಲಿಲ್ಲ. ಈಗಲಾದರು ಸರ್ಕಾರ ಎಚ್ಚೆತ್ತು ಈ ಗೊರವಯ್ಯನ ಕಷ್ಟವನ್ನ ರೂಪಿಸಬೇಕಿದೆ.ಗೊರವಯ್ಯನಿಗೆ ಸಹಾಯ ಮಾಡಬಯಸುವವರು ಈ ಅಕೌಂಟ್ ಗೆ ಹಣ ಸಂದಾಯ ಮಾಡಬಹುದು A/C no. 10763100004417  IFSC code, PKGB0010763

LEAVE A REPLY

Please enter your comment!
Please enter your name here