ಅನ್ನ ಅನ್ನ ಎಂದು ಪರದಾಡುವ ನಿರಾಶ್ರಿತರು; ಸರ್ಕಾರಕ್ಕೆ ಕೇಳುತ್ತಿಲ್ಲವೇ ಜನರ ಅಳಲು?

ಅನ್ನ ಅನ್ನ ಎಂದು ಪರದಾಡುವ ನಿರಾಶ್ರಿತರು; ಸರ್ಕಾರಕ್ಕೆ ಕೇಳುತ್ತಿಲ್ಲವೇ ಜನರ ಅಳಲು?

796
0

ತಮ್ಮ ಅಸಹಾಯಕತೆ ತೋರಿಸುತ್ತಿರುವ ನಿರಾಶ್ರಿತರು ಹೇಳಲಾರದೆ ಕೈಸನ್ನೆಯಲ್ಲೇ ಊಟ ಇಲ್ಲ ಎಂದು ಕಣ್ಣೀರಿಟ್ಟ ಹೃದಯಕಲುಕುವ ದೃಶ್ಯ ಕಂಡುಬಂತು. ನಗರದಲ್ಲಿ ಕೈ ಕಾಲು ಕಳೆದುಕೊಂಡ ಎಲ್ಲಿ ಹೋಗಕ್ಕೆ ಆಗದೇ ಒಂದೇ ಒಂದು ತುತ್ತು ಅನ್ನಕ್ಕಾಗಿ ಮುಂಜಾನೆಯಿಂದ ಮಧ್ಯಾಹ್ನ ಆದರೂ ರಸ್ತೆಬದಿಯಲ್ಲಿ ಪರದಾಡುತ್ತಿದ್ದಾರೆ ಈ ನಿರಾಶ್ರಿತರು. ಜಿಲ್ಲಾಡಳಿತ ಆದೇಶಿಸಿದ ಮೂರು ದಿನದ ಲಾಕ್ಡೌನ್ ಜನರೇನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.

ಆದರೆ ನಿರಾಶ್ರಿತರ ಬಾಳು ನೋಡಲಾಗದು ಎಲ್ಲಿಬೇಕಲ್ಲಿ ರಸ್ತೆಬದಿಯಲ್ಲಿ ನೀರು ಕುಡಿದು ಮಲಗಿದ್ದಾರೆ ಅವರಿಗೆ ಯಾವುದೇ ಊಟ ವ್ಯವಸ್ಥೆ ಇಲ್ಲ ಜಿಲ್ಲಾಡಳಿತ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಲಾಕ್ಡೌನ್ ಘೋಷಣೆ ಮಾಡಬೇಕಾಗಿತ್ತು ಆದರೆ ಇದು ಯಾವುದೇ ಮಾಡದೆ ಆದೇಶ ನೀಡಿರುವುದರಿಂದ ನಿರಾಶ್ರಿತರು ಪರದಾಡುವ ಸ್ಥಿತಿ ರಾಯಚೂರು ನಗರದಲ್ಲಿ ಉಂಟಾಗಿದೆ. ಒಂದು ಪ್ಯಾಕೆಟ್ ಅನ್ನ ಇಟ್ಟು 2 ಕಾರ್ಮಿಕರನ್ನು ನೇಮಿಸಿ ರಾಯಚೂರು ನಗರದಲ್ಲಿ ಇರುವ ರಸ್ತೆ ಬದಿಯ ನಿರಾಶ್ರಿತರಿಗೆ ಅನ್ನ ನೀಡುವ ಕೆಲಸ ಜಿಲ್ಲಾಡಳಿತ ಮಾಡಬೇಕಾಗಿದೆ. ಸಾವಿರಾರು ಪೊಲೀಸರನ್ನು ಜಿಲ್ಲೆಯಲ್ಲಿ ನಿಯೋಜಿಸಿ ಲಾಕ್ಡೌನ್ ಮಾಡಿದ್ದರಿಂದ ಕರೋನವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಬಹುದು.

ಆದರೆ ನಿರಾಶ್ರಿತರ ಹೊಟ್ಟೆಗೆ ಒಂದೊಪ್ಪತ್ತು ಊಟಕ್ಕೂ ಅನ್ನ ಅನ್ನ ಎಂದು ಪರದಾಡುತ್ತಿರುವ ದೃಶ್ಯ ನೋಡಲಾಗದು ಕೂಡಲೇ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ನಿರಾಶ್ರಿತರಿಗೆ ಆಶ್ರಯ ಒದಗಿಸಿ ಊಟದ ವ್ಯವಸ್ಥೆ ಮಾಡಬೇಕಾಗಿದೆ.

VIAಅನ್ನ ಅನ್ನ ಎಂದು ಪರದಾಡುವ ನಿರಾಶ್ರಿತರು; ಸರ್ಕಾರಕ್ಕೆ ಕೇಳುತ್ತಿಲ್ಲವೇ ಜನರ ಅಳಲು?
SOURCEಅನ್ನ ಅನ್ನ ಎಂದು ಪರದಾಡುವ ನಿರಾಶ್ರಿತರು; ಸರ್ಕಾರಕ್ಕೆ ಕೇಳುತ್ತಿಲ್ಲವೇ ಜನರ ಅಳಲು?
Previous articleಡಾ. ತ್ರಿವೇಣಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು ಗೊತ್ತೇ?
Next articleಮತ್ತೆ ವಿಸ್ತರಣೆ ಆಗುತ್ತಾ ಲಾಕ್ ಡೌನ್?

LEAVE A REPLY

Please enter your comment!
Please enter your name here