ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಏಳು ಮಂದಿಯಿಂದ 1.53 ಕೋಟಿ ರು.ಪಡೆದು ವಂಚನೆ

ಬೆಂಗಳೂರು

ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಏಳು ಜನರಿಗೆ ವಂಚನೆ ಮಾಡಿದ ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಣಿ​ಗಲ್‌ ತಾಲೂ​ಕಿನ ಮಾಚೋನಹಳ್ಳಿಯ ಪ್ರಕಾ​ಶ್‌​, ಮತ್ತು ಹೊಸ​ಕೋ​ಟೆಯ ನಾರಾ​ಯ​ಣಪ್ಪ ಬಂಧಿ​ತರು ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಪಾಟೀಲ್‌ ಎಂಬಾತ ತಲೆ​ಮ​ರೆ​ಸಿ​ಕೊಂಡಿ​ದ್ದು, ಆತ​ನ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ. ಗುತ್ತಿಗೆದಾರ ಮುನಿರಾಜುಗೆ ಆರೋಪಿಗಳಾದ ನಾರಾಯಣಪ್ಪ, ಪ್ರಕಾಶ್‌ ಹಾಗೂ ಪಾಟೀಲ್‌ ಪರಿಚಯವಾಗಿತ್ತು.

ಅಂತೆಯೆ ಮುನಿರಾಜು ಅವರ ತಮ್ಮನ ಮಕ್ಕಳಾದ ಅಭಿಷೇಕ್‌ಗೆ ಜಲಮಂಡಳಿಯಲ್ಲಿ ಸೂಪರಿಂಟೆಂಡೆಂಟ್‌ ಇಂಜಿನಿಯರ್‌ ಮತ್ತು ಸಂದೀಪ್‌ಗೆ ಜೂನಿಯರ್‌ ಅಕೌಂಟೆಂಡ್‌ ಉದ್ಯೋಗ ಕೊಡಿಸುವುದಾಗಿ ವಿವಿಧ ಹಂತಗಳಲ್ಲಿ ಕ್ರಮವಾಗಿ 52 ಲಕ್ಷ ರು. ಹಾಗೂ 12 ಲಕ್ಷ ರು. ಪಡೆದಿದ್ದಾರೆ. ಇನ್ನು ಮುನಿರಾಜು ಅವರ ಪರಿಚಿತರ ಮಕ್ಕಳಾದ ಮನೋಜ್‌ ಕುಮಾರ್‌ನಿಂದ 12 ಲಕ್ಷ ರು, ಹೇಮಂತ್‌ನಿಂದ 12 ಲಕ್ಷ ರು. ಹಾಗೂ ಧನುಷ್‌ಕುಮಾರ್‌ನಿಂದ 3 ಲಕ್ಷ ರು. ಪಡೆದುಕೊಂಡಿದ್ದಾರೆ. ಒಟ್ಟಾರೆ ಆರೋಪಿಗಳು ಏಳು ಮಂದಿಯಿಂದ 1.53 ಕೋಟಿ ರು.ಪಡೆದು ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Leave a Reply

Your email address will not be published.