ನಾವು ಪಾದಯಾತ್ರೆ ಮಾಡದೇ ಇರಬಹುದು. ಆದ್ರೆ ಜನರ ಪರವಾಗಿ ನಮ್ಮ ಸರ್ಕಾರವಿದೆ: ಸಚಿವ ಅಶೋಕ್

ರಾಜಕೀಯ

ಬೆಂಗಳೂರು: ಸಿಎಂ ಬೆಂಗಳೂರು ಅಭಿವೃದ್ಧಿಗೆ ₹6 ಸಾವಿರ ಕೋಟಿ ಕೊಟ್ಟಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹106 ಕೋಟಿ ಕೊಡ್ಬೇಕಿತ್ತು. ₹106 ಕೋಟಿ ಬದಲು ₹206 ಕೋಟಿ ಹಣ ಕೊಟ್ಟಿದ್ದಾರೆ. ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದು ಇದೇ ವೇಳೆ ಕಾಂಗ್ರೆಸ್ ಪಾದಯಾತ್ರೆ ಸಂಬಂಧ ವಾಗ್ದಾಳಿ ನಡೆಸಿದ್ದಾರೆ. ನಾವು ಪಾದಯಾತ್ರೆ ಮಾಡದೇ ಇರಬಹುದು. ಆದ್ರೆ ಜನರ ಪರವಾಗಿ ನಮ್ಮ ಸರ್ಕಾರವಿದೆ. ಅಧಿಕಾರ ಇದ್ದಾಗ ಕಾಂಗ್ರೆಸ್ನವರು ಏನನ್ನೂ ಮಾಡಿಲ್ಲ. ಅಧಿಕಾರ ಕೊಟ್ರೆ ಈಗ ಮಾಡ್ತೀನಿ ಅಂದ್ರೆ ಜನ ನಂಬ್ತಾರಾ? ಜನರಿಗೆ ಗೊತ್ತಾಗಿದೆ. ಅಧಿಕಾರ ಇದ್ದಾಗ ಕೆಲಸ ಮಾಡಿಲ್ಲ. ಈಗ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ಏನ್ ಮಾಡ್ತಾರೆ, ಚುನಾವಣೆ ಬಂದಾಗ ಅಣ್ಣಾ, ಅಕ್ಕಾ, ಆಂಟಿ ವೋಟ್ ಕೊಡಿ ಅಂತಾರೆ. ಐದು ವರ್ಷ ಅಧಿಕಾರ ಕೊಟ್ಟರೆ ಯಾವುದೇ ಕೆಲಸ ಮಾಡಲ್ಲ ಎಂದು ಬೆಂಗಳೂರಿನಲ್ಲಿ ಸಚಿವ R.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿ ಮತ್ತೊಂದು ಕಡೆ  ಕಾಂಗ್ರೆಸ್ ಎರಡನೇ ಹಂತದ ಪಾದಯಾತ್ರೆ ಬಗ್ಗೆ ಸಚಿವ ಆರ್. ಅಶೋಕ ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.