
VIDEO.. ತಪ್ಪಿದ ದೊಡ್ಡ ಅನಾಹುತ: ರೈಲು ಬರುವ ಮುನ್ನ ಹಳಿ ಮೇಲೆ ಬಿದ್ದ ಪ್ರಯಾಣಿಕ ಜಸ್ಟ್ ಮಿಸ್
ಬೆಂಗಳೂರು: ರೈಲು ಬರುವ ಮುನ್ನ ಹಳಿ ಮೇಲೆ ಪ್ರಯಾಣಿಕ ಬಿದ್ದು, ಸ್ವಲ್ಪದರಲ್ಲೇ ಬಚಾವ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ಹಳಿ ದಾಟಲು ಹೊಗಿ ಕಾಲು ಜಾರಿ ಪ್ರಯಾಣಿಕ ಬಿದ್ದಿದ್ದಾನೆ.
ರೈಲು ಬರುವಷ್ಟರಲ್ಲಿ ಆರ್ ಪಿ ಎಫ್ ಸಿಬ್ಬಂದಿಗಳಾದ ಪ್ರದೀಪ್ ಹಾಗೂ ASI ರವಿ ಜಿ.ಡಿ ಅವರ ಸಮಯ ಪ್ರಜ್ಞೆಯಿಂದ ಪ್ರಯಾಣಿಕ ಪಾರಾಗಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರ್ ಪಿ ಎಫ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.