Home District ಸರ್ಕಾರ ಎಂದರೆ ಮುಖ್ಯಮಂತ್ರಿ!; ಆಶ್ಚರ್ಯಕರ ಹೇಳಿಕೆ ನೀಡಿದ ಗೋವಿಂದ ಕಾರಜೋಳ

ಸರ್ಕಾರ ಎಂದರೆ ಮುಖ್ಯಮಂತ್ರಿ!; ಆಶ್ಚರ್ಯಕರ ಹೇಳಿಕೆ ನೀಡಿದ ಗೋವಿಂದ ಕಾರಜೋಳ

886
0

ಬೆಳಗಾವಿ; ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ.ಬೆಳಗಾವಿ ಲೋಕಸಭೆ ಚುನಾವಣೆ ಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತಿದೆ.ನಮ್ಮ ಕಾರ್ಯಕರ್ತರು 8 ಮತಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಮತದಾರರಿಗೂ ಉತ್ಸಾಹ ಇದೇ. ಬಿಜೆಪಿ ಪಕ್ಷಕ್ಕೆ ಮತಕೊಡಬೇಕು. ಸುರೇಶ್ ಅಂಗಡಿ 20 ವರ್ಷ ಸಂಸದರಾಗಿ, ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.ಅವರ ಧರ್ಮಪತ್ನಿ ಮಂಗಲ ಅಂಗಡಿ ಗೆಲ್ಲಿಸಬೇಕೆಂಬ ಭಾವನೆ ಮತದಾರರಲ್ಲಿ ಇದೇ.ಬೆಳಗಾವಿ ಲೋಕಸಭೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದ ಡಿಸಿಎಂ ಗೋವಿಂದ ಕಾರಜೋಳ.

ಕೆ.ಎಸ.ಈಶ್ವರಪ್ಪನವರಿಗೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಹೇಳಿದೆಯಾ ಪ್ರಶ್ನೆಗೆ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ನಿರ್ದೇಶನದಂತೆ,ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡುತ್ತಿದೆ.33 ಇಲಾಖೆಗೂ ಮುಖ್ಯಮಂತ್ರಿಗಳು ಅನುದಾನ ಹಂಚಿಕೆ ಮಾಡಿದ್ದಾರೆ.ಸಿಎಂ ಕೊಟ್ಟಿರುವ ಬಜೆಟನಲ್ಲಿ 224 ಮತಕ್ಷೇತ್ರಕ್ಕೂ ಕೇಳಿದಷ್ಟು ಅನುದಾನ ಕೊಡಲು ಸಾಧ್ಯ ಆಗುವುದಿಲ್ಲ.

ಹೀಗಾಗಿ ಶಾಸಕರು, ಸಂಸದರು ನಮ್ಮ ಬಳಿಗೆ ಬಂದಾಗ ಹೇಳ್ತಿವಿ.ನಮಗೆ ಕೊಟ್ಟಿರುವ ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಬೇಕಾದ್ರೆ ಸಿಎಂ ಅವರನ್ನ ಕೇಳಿ ಅಂತಾ ಹೇಳ್ತಿವಿ.ನಾವೇ ಹತ್ತಾರು ಬಾರಿ ಹೇಳಿದ್ದೇವೆ. ಅದರಂತೆ ಸಿಎಂ ಅವರಿಗೆ ಶಾಸಕರ ಬೇಕು ಬೇಡುಗಳನ್ನ ನೋಡಿ ಅನುದಾನ ಕೊಡ್ತಾರೆ.ಇದು ಕಳೆದ 70 ವರ್ಷಗಳಿಂದ ನಡೆದುಕೊಂಡು ಬಂದಿರುವುದು.

ಸರ್ಕಾರ ಅಂದ್ರೆ ಮುಖ್ಯಮಂತ್ರಿ.ಮುಖ್ಯಮಂತ್ರಿ ಜೊತೆಗೆ ಸಚಿವ ಸಂಪುಟದ ಸದಸ್ಯರು ಒಮ್ಮತದಿಂದ ಕೆಲಸ ಕಾರ್ಯ ಮಾಡಬೇಕು.ಮುಖ್ಯಮಂತ್ರಿಗಳಿಗೆ ಇರುವ ಪರಮಾಧಿಕಾರವನ್ನ ನಾವು ಯಾರೂ ಪ್ರಶ್ನೆ ಮಾಡುವುದು ಸಾಧುನು ಅಲ್ಲ, ಸೌಜನ್ಯವೂ ಅಲ್ಲ.ನಮ್ಮ ಸಚಿವ ಸಂಪುಟದ ಜಸದಸ್ಯರು, ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಯಾರೂ ಕೂಡಾ ಮುಖ್ಯಮಂತ್ರಿ ಪರಮಾಧಿಕಾರ ಪ್ರಶ್ನೆ ಮಾಡುವುದು ಸರಿಯಲ್ಲ.ಏನೇ ಸಮಸ್ಯೆ ಇದ್ದರು ಸಂಪುಟದ ಕ್ಯಾಬಿನೆಟ್ ಹಾಲಿನಲ್ಲಿ ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು.

ಮುಸುಕಿನ ಗುದ್ದಾಟ ಏನು ಅಲ್ಲ.ಅವರು ಯಾವ ವಿಚಾರ ಇಟ್ಟುಕೊಂಡು ಪತ್ರ ಬರೆದಿರುವುದು ಗೊತ್ತಿಲ್ಲ. ನಾನು ಅವರೊಂದಿಗೆ ಚರ್ಚೆ ಮಾಡಿಲ್ಲ.ಒಂದು ಸರ್ಕಾರ ವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ಕೆಲಸಬೇಕು.ಮುಖ್ಯಮಂತ್ರಿ ನಿರ್ದೇಶನದಂತೆ ಕೆಲಸ ಮಾಡಬೇಕು.ಡಿಕೆ ಶಿವಕುಮಾರ್ ಇದರಲ್ಲಿ ಹಗರಣವಾಗಿದೆ ಆರೋಪ ವಿಚಾರ.ಕಾಂಗ್ರೆಸನವರಿಗೆ ಬೇರೆ ಮಾಡಲು ಕೆಲಸವಿಲ್ಲ.ಇಂತಹ ಸುಳ್ಳು ಆರೋಪದಿಂದ ಅವರು ಏನು ಸಾಧಿಸಲು ಆಗುವುದಿಲ್ಲ ಎಂದು ಡಿಕೆಶಿ ಗೆ ಟಾಂಗ್.

Previous articleಯಡಿಯೂರಪ್ಪನವರ ಕುಟುಂಬ ರಾಜಕಾರಣದಿಂದಲೇ ಬಿಜೆಪಿ ಸರ್ಕಾರ ಹದಗೆಡುತ್ತಿದೆ: ಯತ್ನಾಳ್
Next articleಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆ; ಸತೀಶ ಜಾರಕಿಹೊಳಿಯವರಿಂದ ಚುನಾವಣಾ ಪ್ರಚಾರ ಸಭೆ

LEAVE A REPLY

Please enter your comment!
Please enter your name here