Home District H.ವಿಶ್ವನಾಥ್ ಒಬ್ಬ ರಾಜಕೀಯ ವ್ಯಭಿಚಾರಿ! ಹಳ್ಳಿಹಕ್ಕಿಗೆ ತೆನೆ ಹೊರಿಸಿ ತಪ್ಪು ಮಾಡಿದೆ! ಹೆಚ್ಡಿಕೆ ಅವರ ಈ...

H.ವಿಶ್ವನಾಥ್ ಒಬ್ಬ ರಾಜಕೀಯ ವ್ಯಭಿಚಾರಿ! ಹಳ್ಳಿಹಕ್ಕಿಗೆ ತೆನೆ ಹೊರಿಸಿ ತಪ್ಪು ಮಾಡಿದೆ! ಹೆಚ್ಡಿಕೆ ಅವರ ಈ ಸ್ಥಿತಿಗೆ ನಾನೂ ಕಾರಣ!

2226
0
SHARE

ಅತೃಪ್ತ ಶಾಸಕ, ಹಿರಿಯ ನಾಯಕ ಎಚ್. ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ ಮಹೇಶ್ ಮತ್ತೆ ಕಿಡಿ ಕಾರಿದ್ದಾರೆ. ವಿಶ್ವನಾಥ್ ಅವರು ದಿಲ್ಲಿಯಲ್ಲಿ ಕುಳಿತು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಬೆದರಿಕೆ ಹಾಕುವ ಬದಲು ಸದನಕ್ಕೆ ಬಂದು ಹಕ್ಕುಚ್ಯುತಿ ಮಂಡಿಸಲಿ ಎಂದು ಸವಾಲು ಹಾಕಿದ್ದಾರೆ. ವಿಶ್ವನಾಥ್ ಅವರೇ ಒಂಭತ್ತು ಬಾರಿ ಚುನಾವಣೆ ಎದುರಿಸಿದ್ದೀರಿ. ಅದಕ್ಕೆ ಎಲ್ಲಿಂದ ಹಣ ತಂದಿರಿ ಎಂಬುದನ್ನು ವಿಧಾನಸಭೆಯಲ್ಲೇ ಬಹಿರಂಗಪಡಿಸುತ್ತೇನೆ. ಬನ್ನಿ ನೋಡೋಣ ಎಂದು ಸಾರಾ ಹಳ್ಳಿಹಕ್ಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳ್ಳಿಹಕ್ಕಿಯನ್ನು ಸಚಿವ ಸಾರಾ ಮಹೇಶ್ ಮತ್ತೆ ಕೆಣಕಿದ್ದಾರೆ… ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಾ ವಿಶ್ವನಾಥ್, 28 ಕೋಟಿಗೆ ಸೇಲ್ ಆಗಿದ್ದಾರೆ ಅಂತಾ ಸಾರಾ ಮಹೇಶ್ ಗಂಭೀರ ಆರೋಪ ಮಾಡಿದ್ದರು.. ಇದಕ್ಕೆ ಪ್ರತಿಯಾಗಿ ಸಾರಾ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ವಿಶ್ವನಾಥ್ ತಿರುಗೇಟು ನೀಡಿದ್ದರು… ಈಗ ಮತ್ತೆ ಹಳ್ಳಿಹಕ್ಕಿಗೆ ಸಾರಾ ತಿವಿದಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾ.ರಾ ಮಹೇಶ್ ಹಿರಿಯ ನಾಯಕ ಎಚ್‌.ವಿಶ್ವನಾಥ್ ವಿರುದ್ಧ ಹರಿಹಾಯ್ದಿದ್ದಾರೆ. ನೀವು ರಾಜಕೀಯ ಶುದ್ದಹಸ್ತರಾಗಿದ್ದಲ್ಲಿ ಯಾಕೆ ವಿಶೇಷ ವಿಮಾನದಲ್ಲಿ ತೆರಳಿ ಮುಂಬೈಯಲ್ಲಿ ಕುಳಿತಿದ್ದೀರಿ ಎಂದು ಮಹೇಶ್ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ನಾನು ಆಡಿದ ಮಾತಿನ ವಿರುದ್ಧ ಸೋಮವಾರ ಬಂದು ಹಕ್ಕು ಚ್ಯುತಿ ಮಂಡಿಸಿ ಎಂದು ಸವಾಲು ಹಾಕಿದ್ದಾರೆ.

ಜಿ.ಟಿ ದೇವೇಗೌಡ ಸೇರಿದಂತೆ ಹಲವು ನಾಯಕರು ಜೆಡಿಎಸ್ ಗೆ ವಿಶ್ವನಾಥ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದನ್ನು ಲೆಕ್ಕಿಸದೆ ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡೆ.. ಅದರ ಫಲ ಈಗ ಅನುಭವಿಸುತ್ತಿದ್ದೇನೆ ಎಂದು ಸಾರಾ ಮಹೇಶ್, ನಾನು ಎಸ್ ಅನ್ನದಿದ್ದರೆ ಅವರು ಪಕ್ಷಕ್ಕೆ ಬರುತ್ತಿರಲಿಲ್ಲ. ಹಾಗಾಗಿ, ಹೆಚ್ಡಿಕೆ ಅವರ ಇಂದಿನ ಇಕ್ಕಟ್ಟಿನ ಸ್ಥಿತಿಗೆ ನಾನು ಕೂಡ ಪರೋಕ್ಷ ಕಾರಣ ಎಂದು ತಮ್ಮನ್ನು ತಾವೇ ದೂರಿಕೊಂಡರು.ಮಾತಿನಲ್ಲೇ ಹಳ್ಳಿಹಕ್ಕಿಯನ್ನು ಕುಕ್ಕಿದ ಸಾರಾ ಮಹೇಶ್, ನಿಮ್ಮನ್ನ ರಾಜ್ಯಾಧ್ಯಕ್ಷ ಮಾಡಿದ್ವಿ. ನಾವು ಜಾತಿವಾದಿಗಳ…? ನಾನು ವ್ಯವಹಾರದಲ್ಲಿ ಒಬ್ಬ ಡೆವಲಪರ್ ಆಗಿದ್ದೇನೆ. ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಬಾರಿ ಕೆ.ಆರ್. ನಗರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನೀವು ಒಂಬತ್ತು ಚುನಾವಣೆ ಎದುರಿಸಿದ್ದಿರಲ್ಲಾ, ನಿಮಗೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಮಹೇಶ್ ಮತ್ತು ವಿಶ್ವನಾಥ್ ನಡುವಿನ ಜಗಳದಿಂದ ರಾಜಕಾರಣಿಗಳ ನಿಜ ಬಣ್ಣ ಬಯಲಾಗುತ್ತಿದೆ… ನಾವು ಗೆಲ್ಲಿಸಿ ಕಳುಹಿಸಿದ ಜನಪ್ರತಿನಿಧಿಗಳ ಮುಖವಾಡ ಕಳಚಿ ಬೀಳುತ್ತಿರೋದನ್ನ ಅಸಹಾಯಕರಾಗಿ ಮತದಾರರು ನೋಡುವಂತ ಸ್ಥಿತಿ ತಲುಪಿದ್ದಾರೆ.

LEAVE A REPLY

Please enter your comment!
Please enter your name here