Home District H.ವಿಶ್ವನಾಥ್ ಬ್ಲೂ ಬಾಯ್, ಬ್ಲೂ ಫಿಲ್ಮ್ ಹೀರೋ! ಚಡ್ಡಿ ಒಗೆದರೆ ಪರವಾಗಿಲ್ಲ, ಆದ್ರೆ ಕಂಡ ಕಂಡ...

H.ವಿಶ್ವನಾಥ್ ಬ್ಲೂ ಬಾಯ್, ಬ್ಲೂ ಫಿಲ್ಮ್ ಹೀರೋ! ಚಡ್ಡಿ ಒಗೆದರೆ ಪರವಾಗಿಲ್ಲ, ಆದ್ರೆ ಕಂಡ ಕಂಡ ಕಡೆ ಬಿಚ್ಚಬಾರದು!

843
0
SHARE

ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಗುಡುಗಿದ್ದ ಹೆಚ್.ವಿಶ್ವನಾಥ್ ಅವರಿಗೆ ಸಾ.ರಾ.ಮಹೇಶ್ ಚಳಿ ಜ್ವರ ಬರಿಸಿದ್ದಾರೆ. ನಾನಲ್ಲ ಬ್ಲೂ ಫಿಲಂ ಮಾಡಿದವ. ಹೆಚ್.ವಿಶ್ವನಾಥ್ ಬ್ಲೂಬಾಯ್, ಬ್ಲೂ ಫಿಲಂ ಹೀರೋ ಎಂದು ಗುಡುಗಿ ವಿಶ್ವನಾಥ್ ಅವರ ಸಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಇನ್ನೂ ಚಡ್ಡಿ ಒಗೆದಿದ್ರು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಾರಾ ಮಹೇಶ್ ಚಡ್ಡಿ ಒಗೆದರೆ ಪರವಾಗಿಲ್ಲ, ಆದ್ರೆ ಕಂಡ ಕಂಡ ಕಡೆ ಚಡ್ಡಿ ಬಿಚ್ಚಬಾರದು. ಹಳ್ಳಿ ಹಕ್ಕಿಗೆ ಬೀಸಿಗೆ, ಮಳೆಗಾಲ, ಚಳಿಗಾಲಕ್ಕೊಂದು ಗೂಡು ಇದೆ ಎಂದು ಸಾ.ರಾ.ಮಹೇಶ್ ಗುಡುಗಿದ್ದಾರೆ.

ಮಾಜಿ ಸಚಿವರಾದ ಸಾರಾ ಮಹೇಶ್ ಮತ್ತು ಹೆಚ್.ವಿಶ್ವನಾತ್ ನಡುವೆ ವಾಕ್ಸಮರ ಅತಿರೇಕಕ್ಕೆ ಹೋಗುತ್ತಿದೆ… ಪರಸ್ಪರ ಏಕವಚನದಲ್ಲೇ ಮಾತಿನ ಚಾಟಿ ಬೀಸುತ್ತಿರೋ ಉಭಯ ನಾಯಕರು ತೀರ ವೈಯುಕ್ತಿಕ ವಿಚಾರಗಳನ್ನ ಎತ್ತಿ ಬಹಿರಂಗವಾಗಿ ತಮ್ಮ ಮರ್ಯಾದೆಯನ್ನ ತಾವೇ ಹರಾಜಿಗೆ ಹಾಕಿಕೊಳ್ಳುತ್ತಿದ್ದಾರೆ.. ಭಾನುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ಕರೆದು ಸಾರಾ ಮಹೇಶರನ್ನು ಹಳ್ಳಿಹಕ್ಕಿ ಕುಟುಕಿತ್ತು… ಇಂದು ಹಳ್ಳಿಹಕ್ಕಿಗೆ ಕಲ್ಲು ಹೊಡೆಯುವ ಸರದಿ ಸಾರಾ ಮಹೇಶ್ ರದ್ದು… ಇಬ್ಬರ ಜಗಳ ಜನರಿಗೆ ಪುಕ್ಕಟೆ ಮನರಂಜನೆ…

ಮೈಸೂರಿನಲ್ಲಿ ಮಾತನಾಡಿದ ಸಾರಾ ಮಹೇಶ್, ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ. ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿ ಕೊಳ್ಳುತ್ತೀರಾ ಎಂದು ಟಾಂಗ್ ನೀಡಿದ್ದಾರೆ.

ನಿಮ್ಮ ಯೋಗ್ಯತೆ ಮೈಸೂರು ಮತ್ತು ಮಡಿಕೇರಿ ಜನರಿಗೆ ಗೊತ್ತಿದೆ. ಕೊಚ್ಚೆ ಗುಂಡಿ ನೀವು, ನಿಮ್ಮ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ. ನಾನಾ ಅಯೋಗ್ಯ ನೀವಾ ಎಂಬುದು ತೀರ್ಮಾನವಾಗಲಿ. ಚಡ್ಡಿ ಒಗೆದರೆ ಪರವಾಗಿಲ್ಲ. ಆದರೆ ಕಂಡ ಕಂಡ ಕಡೆ ಅದನ್ನು ಬಿಚ್ಚಬಾರದು ಎಂದು ಸಾರಾ ಮಹೇಶ್, ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ…ವಿಶ್ವನಾಥ್ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಅನರ್ಹ ಆದ ಮೇಲೆ ಎಚ್ ವಿಶ್ವನಾಥ್ ಹೋಗಿ ಹುಚ್ಚು ವಿಶ್ವನಾಥ್ ಆಗಿದ್ದಾರೆ. ಅವರಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು.

9 ದಿವಸದ ನವರಾತ್ರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬನ್ನಿ, ನಾನು ಯಾವುದೇ ಆಸೆ ಆಮಿಷಗಳಿಗೂ ಬಲಿಯಾಗಿಲ್ಲ ಎಂದು ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡಿ ಹೇಳಿ” ಎಂದು ಸವಾಲ್ ಹಾಕಿದರು.ಇದೇ ವೇಳೆ, ಸಿಎಂ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡ ಮಹೇಶ್, ಕಳೆದ ಕೆಲವು ದಿನಗಳಿಂದ ಅತೃಪ್ತ ಪ್ರೇತವನ್ನು ಸಮಾಧಾನಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅತೃಪ್ತ ಪ್ರೇತವನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ಯತ್ನಿಸುತ್ತಿದ್ದಾರೆ ಎಂದು ಮಹೇಶ್ ಟಾಂಗ್ ನೀಡಿದ್ರು…

LEAVE A REPLY

Please enter your comment!
Please enter your name here