Home District H.D.ರೇವಣ್ಣ ಅಹಂನಿಂದಾಗಿ ರೈತರಿಗೆ ಮರೀಚಿಕೆಯಾದ ನೀರು.?! ಹೇಮಾವತಿಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡ ಸೂಪರ್ CM..!?ತಮಿಳುನಾಡಿಗೆ ನೀರು ಬಿಡೋ...

H.D.ರೇವಣ್ಣ ಅಹಂನಿಂದಾಗಿ ರೈತರಿಗೆ ಮರೀಚಿಕೆಯಾದ ನೀರು.?! ಹೇಮಾವತಿಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡ ಸೂಪರ್ CM..!?ತಮಿಳುನಾಡಿಗೆ ನೀರು ಬಿಡೋ ಇವರು ಪಕ್ಕದ ಜಿಲ್ಲೆಗೆ ಬಿಟ್ಟಿಲ್ಲ”..!?

2845
0
SHARE

ಕೊಡಗು, ಕೇರಳದಲ್ಲಿ ಮಳೆಯ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ.. ಕಾವೇರಿ,ಹೇಮಾವತಿಯಿಂದ ನೀರು ತಮಿಳುನಾಡು ಸೇರಿದೆ..ಆದ್ರೆ,ವಿಷಾದ ಸಂಗತಿ ಅಂದ್ರೆ, ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ..ಸಚಿವ ಹೆಚ್.ಡಿ.ರೇವಣ್ಣ ಅವ್ರ ಪ್ರಭಾವಕ್ಕೆ ತುಮಕೂರಿನ ಅನ್ನದಾತರು ಅಕ್ಷರಶಃ ಆಕಾಶದತ್ತ ಮುಖಮಾಡಿದ್ದಾರೆ…

ಗೋರೂರು ಜಲಾಶಯ ಭರ್ತಿಯಾದ್ರೂ ಸಹ ತುಮಕೂರಿಗೆ ಹೇಮಾವತಿ ನೀರು ಮರಿಚಿಕೆಯಾಗಿದೆ..ಹೇಮೆ ಕೇವಲ ಹಾಸನಕ್ಕೆ ಮಾತ್ರ ಸೀಮಿತವಾಗಿರುವಂತೆ ತುಮಕೂರಿಗೆ ನೀರು ಹರಿಸದಂತೆ ಅನ್ಯಾಯ ಮಾಡುತ್ತಿದ್ದಾರೆ ಅಂತಾ ಅನ್ನದಾತರು ಆಕ್ರೋಷಗೊಂಡಿದ್ದಾರೆ…

ಪ್ರತಿವರ್ಷ ತುಮಕೂರು ಜಿಲ್ಲೆಗೆ 24 ಟಿಎಂಸಿ ಹೇಮಾವತಿ ನೀರು ಬಿಡಲಾಗುತ್ತೆ ಅಂತಾ ಪತ್ರದಲ್ಲಿ ತೋರಿಸೋ ಹೇಮಾವತಿ ಇಂಜಿನಿಯರ್ ಗಳು ಪೂರ್ಣಪ್ರಮಾಣದಲ್ಲಿ ನೀರು ಹರಿಸದಂತೆ ಅನ್ಯಾಯ ಮಾಡುತ್ತಿದ್ದಾರೆ ಅಂತಾ ರೈತರು ಆರೋಪಿಸಿದ್ದಾರೆ..ಪ್ರಸ್ತುತ ಎಡದಂಡೆ ನಾಲೆ ಮೂಲಕ ಜಿಲ್ಲೆಗೆ 1116 ಕ್ಯೂಸೆಕ್ ನೀರು ಹರಿಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ರೆ,ಜಿಲ್ಲೆಯ ಕೆರೆಗಳು ಮಾತ್ರ ಖಾಲಿ ಖಾಲಿಯಾಗಿದೆ…

ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ ಹಾಗೂ ತುರುವೇಕೆರೆ ತಾಲ್ಲೂಕಿನ ಮಂಗಳ ಜಲಾಶಯ ಈವರೆಗೂ ಹೇಮಾವತಿ ನೀರು ಕಾಣದಂತೆ ಬರಡಾಗಿದೆ..ಹಾಸನದಲ್ಲಿ ತಮಗೆ ಬೇಕಾಗುವಷ್ಟು ನೀರು ಪೂರೈಸಿಕೊಳ್ಳೋ ಸಚಿವ ಹೆಚ್.ಡಿ.ರೇವಣ್ಣ ತುಮಕೂರಿಗೆ ನೀರು ಬಾರದಂತೆ ಅಡ್ಡಗಾಲಾಗಿದ್ದಾರೆ ಅಂತಾ ತುಮಕೂರಿನ ರೈತರು,ಜನರು ಸಿಡಿದೆದಿದ್ದಾರೆ…

ಇದರಿಂದಾಗಿ ಜಿಲ್ಲೆಯ ಗುಬ್ಬಿ,ಕುಣಿಗಲ್, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ ಭಾಗದ ರೈತರು ಕಂಗಾಲಾಗಿ ಹೋಗಿದ್ದಾರೆ..ತಮಿಳುನಾಡಿಗೆ ಪ್ರಮಾಣಕ್ಕಿಂತ ಹೆಚ್ಚಾಗಿ ಹರಿಸಿ ಸಮುದ್ರ ಪಾಲಾಗಿಸೋ ಬದಲು ಕೂಡಾಲೇ ತುಮಕೂರು ಜಿಲ್ಲೆಗೆ ಹರಿಸದಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಯೋ ಎಲ್ಲಾ ಮುನ್ಸೂಚನೆ ಸಿಕ್ಕಂತಾಗಿದೆ…

LEAVE A REPLY

Please enter your comment!
Please enter your name here