Home District H.D.Revanna ಸ್ಥಳಿಯ ಸಂಸ್ಥೆಗಳ ಪಲಿತಾಂಶದ ಬಗ್ಗೆ ಹೇಳಿದ್ದು ಹೀಗೆ… “JDSಗೆ ಇದು ಆಶಾದಾಯಕವಾದ ಪಲಿತಾಂಶ”

H.D.Revanna ಸ್ಥಳಿಯ ಸಂಸ್ಥೆಗಳ ಪಲಿತಾಂಶದ ಬಗ್ಗೆ ಹೇಳಿದ್ದು ಹೀಗೆ… “JDSಗೆ ಇದು ಆಶಾದಾಯಕವಾದ ಪಲಿತಾಂಶ”

1656
0
SHARE

ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಕ್ಕೆ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯ 5 ಕಡೆಗಳಲ್ಲೂ ಮತ್ತೆ ಜನರು ನಮ್ಮ ಪಕ್ಷವನ್ನು ಬೆಂಬಲಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು…

ಹಾಸನ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಮೂವರು ಪಕ್ಷೇತರರ ಪೈಕಿ ಇಬ್ಬರು ನಮ್ಮ ಪಕ್ಷದವರೇ,ಈಗಾಗಲೇ ಅವರೊಂದಿಗೆ ಮಾತನಾಡಿದ್ದೇನೆ. ಅವರ ಬೆಂಬಲದಿಂದ ಜೆಡಿಎಸ್ ಬಲ 19ಕ್ಕೆ ಏರಲಿದ್ದು, ಮತ್ತೊಮ್ಮೆ ನಾವೇ ಅಧಿಕಾರ ಹಿಡಿಯುತ್ತೇವೆ ಎಂದರು…

ಕೆಲವರು ಜೆಡಿಎಸ್ ಅಭಿವೃದ್ಧಿ ಕೇವಲ ಕಾಗದದಲ್ಲಿ ಇದೆ ಎನ್ನುತ್ತಾರೆ. ಆದರೆ ಅಂಥವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಪ್ರೀತಂ ಗೌಡರಿಗೆ ರೇವಣ್ಣ ಟಾಂಗ್ ನೀಡಿದರು…

ಇನ್ನು ಮುಂದೆ ರಾಜಕೀಯ ಬಿಟ್ಟು ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ, ಹೊಳೆನರಸೀಪುರದಲ್ಲಿ ಎಲ್ಲಾ 23 ಸ್ಥಾನ ನೀಡಿರುವ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ರಾಜ್ಯದಲ್ಲೂ ಕಳೆದ ಬಾರಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳಿಸಿದೆ ಎಂದರು…

LEAVE A REPLY

Please enter your comment!
Please enter your name here