
ಹರ್ಷ ಕೊಲೆ ಪ್ರಕರಣ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ..! ಜೈಲಿನಿಂದಲೇ ಹಂತಕರು tiktok
ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ಅರೋಪಿಗಳನ್ನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು ಆದರೆ ಆರೋಪಿಗಳು ಜೈಲಿನಿಂದಲೇ ಕುಟುಂಬಸ್ಥರ ಜೊತೆಗೆ ಮಾತುಕತೆ tik.tok ಮೋಜು ಮಸ್ತಿ ಮಾಡುವುದರ ಮೂಲಕ ಆರೋಪಿಗಳಿಗೆ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ರಾಜಾತಿಥ್ಯ ನೀಡುತ್ತಿದರಾ ಅನ್ನೋ ಅನುಮಾನ ವ್ಯಕ್ತವಾಗುತ್ತದೆ.. ಇನ್ನು ಜೈಲಿನಲ್ಲಿಯೇ ಹಂತಕರು ತಮಗೆ ಬೇಕಾದವರಿಗೆ ಮತ್ತು ಸ್ನೇಹಿತರಿಗೆ ಮೆಸೇಜ್ ಚಾಟಿಂಗ್ ಮಾಡಿದರು ಮೂಲಕ ಪುಂಡಾಟ ಮೆರೆದಿದ್ದು ಹಣಕ್ಕಾಗಿ ಡಿಲ್ ನಡೆದಿದೆಯಾ ಅನ್ನೋ ಪ್ರಶ್ನೇ ಕಾಡುತಿದೆ ..
ಟಿಕ್ ಟಾಕ್ ವಿಡಿಯೋ ನೋಡಿ ಪರಪ್ಪನ ಅಗ್ರಹಾರ ಪೊಲೀಸರು ಎರಡು ದಿನದ ಹಿಂದೆ ದೂರು ದಾಖಲಿಸಿಕೊಂಡು ನಿನ್ನೆ ಬ್ಯಾರಕ್ ಎಂಟರ ಜೈಲಿನ ಮೇಲೆ ಪೊಲೀಸರು ದಾಳಿ ಕೂಡ ಮಾಡಿದ್ರು ಸದ್ಯ ಅರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರದಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.. ಇನ್ನು ಕೇಂದ್ರ ಕಾರಾಗ್ರಹದಲ್ಲಿದ್ದ ವಿಚಾರಣಾಧೀನ ಕೈದಿ ನಿಹಾರ್ ಅಲಿಯಾಸ್ ವಾಲಿಬಾ ಎಂಬಾತ ಮೊಬೈಲ್ ನೀಡಿರುವುದಾಗಿ ತಿಳಿದು ಬಂದಿದೆ ಸದ್ಯ ಹಂತಕರು ಜೈಲಿನಿಂದಲೇ ರಂಜಾನ್ ಹಬ್ಬದ ಪ್ರಯುಕ್ತ ಕುಟುಂಬಸ್ಥರ ಜೊತೆಗೆ ಮಾತುಕತೆ ಮಾಡಿದ್ದಾರೆ.