ಹಸೆಮಣೆ ಏರುತ್ತಿದೆ ‘ಕಮಲಿ’ ಧಾರವಾಹಿಯ ಮತ್ತೊಂದು ಜೋಡಿ: ಇದೇ ವಾರ ಸುಹಾಸ್, ಗೇಬ್ರಿಯೆಲ್ಲಾ ವಿವಾಹ

ಚಲನಚಿತ್ರ

ಕನ್ನಡದ ಕಮಲಿ ಧಾರವಾಹಿಯಲ್ಲಿ ನಟಿಸಿದ್ದ ನಿಂಗಿ ಅಲಿಯಾಸ್ ಅಂಕಿತಾ ಹಸೆಮಣೆ ಏರಿದ ಬೆನ್ನಲ್ಲೇ ಇದೀಗ ಈ ಧಾರವಾಹಿಯ ಮತ್ತೊಂದು ಜೋಡಿ ಗೃಹಸ್ತ್ರಾಶ್ರಮಕ್ಕೆ ಕಾಲಿಡಲು ಸಜ್ಜಾಗಿದೆ.

‘ಕಮಲಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅಂಕಿತಾ ಅಲಿಯಾಸ್ ಗೇಬ್ರಿಯೆಲಾ ಹಾಗೂ ಶಂಬು ಅಲಿಯಾಸ್ ಸುಹಾಸ್ ಇದೇ ವಾರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೀತಿಸುತ್ತಿದ್ದ ಜೋಡಿಗಳು ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

ಕಮಲಿ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿ ಪರಿಚಯವಾಗಿದ್ದ ಸುಹಾಸ್ ಹಾಗೂ ಗೇಬ್ರಿಯೆಲಾ ಬಳಿಕ ಸ್ನೇಹಿತರಾಗಿದ್ದಾರೆ. ಹೊರಾಂಗಣ ಶೂಟಿಂಗ್ ಸಂದರ್ಭದಲ್ಲಿ ಸುಹಾಸ್ ಹಾಗೂ ಗೇಬ್ರಿಯೆಲಾ ಮಧ್ಯೆ ಹೆಚ್ಚಿನ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತು. ಕಳೆದ 3 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದರೂ ಇಬ್ಬರು ಪ್ರೀತಿಸುತ್ತಿರುವ ವಿಷಯ ಯಾರ ಬಳಿಯೂ ಹೇಳಿರಲಿಲ್ಲ. ಇದೀಗ ಮದುವೆಗೆ ಕೆಲ ದಿನಗಳು ಭಾಕಿ ಇರುವಾಗ ಈ ವಿಷಯವನ್ನು ಜೋಡಿಗಳು ತಿಳಿಸಿದ್ದಾರೆ.

ಸದ್ಯ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿರೋ ಜೋಡಿಗಳು ಆಕ್ಟೋಬರ್ ನಲ್ಲಿ ಆರತಕ್ಷತೆ ಹಮ್ಮಿಕೊಂಡಿದೆ. ಸದ್ಯ ಸುಹಾಸ್ ಪ್ರೇಮ ನಿವೇದನೆ ಮಾಡಿರುವ ವಿಡಿಯೋವನ್ನು ಗೇಬ್ರಿಯೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published.